ಲೋಕದರ್ಶನ ವರದಿ
ಕುರುಗೋಡು 27: ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಐತಿಹಾಸಿಕ ಇತಿಹಾಸಯುಳ್ಳ ನಾಯಕನ ಕೆರೆಯನ್ನು ಹೊಡೆದು ಹಾಕಿರುವ ದುಷ್ಕರ್ಮಿಗಳನ್ನು ಹಾಗೂ ಹಳ್ಳಗಳನ್ನು ಒತ್ತುವರಿ ಮಾಡಿರುವವರ ವಿರುದ್ದ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರವೇ ಸ್ವಾಭಿಮಾನ ಬಣದ ರಾಜ್ಯ ಕಾರ್ಯದರ್ಶಿ ಚಾನಾಳ ಚನ್ನಬಸವರಾಜ ಗುರುವಾರ ಆಗ್ರಹಿಸಿದರು.
ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಕರವೇ ಸ್ವಾಭಿಮಾನ ಬಣದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೆಲವರು ಉದ್ದೇಶಪೂರ್ವಕವಾಗಿ ಕೆರಯನ್ನು ಹೊಡೆದು ಹಾಕಿರುವುದು ಹಾಗೂ ಹಳ್ಳದ ಸ್ಥಳವನ್ನು ಒತ್ತುವರಿ ಮಾಡಿರುವದರಿಂದ ಈಗ ಮೂರು ದಿನದಿಂದ ರಾತ್ರಿ ಸುರಿದ ಮಳೆಗೆ ಪಟ್ಟಣದಲ್ಲಿನ 110ಕೆವಿ, ಬಸ್ ಡೀಪೋ, ಆರೋಗ್ಯ ಸಮುದಾಯ ಕೇಂದ್ರ, ಬಸ್ ನಿಲ್ದಾಣ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣ ಹಾಗೂ ಇನ್ನಿತರ ಸಕರ್ಾರಿ ಕಚೇರಿಗಳು ಜಲಾವೃತಗೊಂಡಿದ್ದು ಮತ್ತು ಸಾರ್ವಜನಿಕರ ಆಸ್ತಿ ನಷ್ಟವಾಗಿದೆ. ಇದಕ್ಕೆ ಹೊಣೆ ಯಾರು ಎಂದು ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆಯನ್ನು ಪ್ರಶ್ನೆ ಮಾಡಿದರು. ಗ್ರಾಮಲೇಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ನೀರ್ಲಕ್ಷ್ಯದಿಂದನೇ ಈ ದುಷ್ಕೃತ್ಯ ನಡೆದಿರುವುದು ಆಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಕರಣ ದಾಖಲೆ:
ಕುರುಗೋಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಚನ್ನಬಸವರಾಜರವರು ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಯನ್ನು ಸ್ವರ್ಥಕ್ಕಾಗಿ, ಉದ್ದೇಶಪೂರ್ವಕವಾಗಿ ಹೊಡೆದು ಹಾಕಿದ ಪರಿಣಾಮ ಕೆರೆಯಿಂದ ನೀರು ಹರಿದು ಬಂದು ಅನೇಕ ಸರ್ಕಾರಿ ಕಚೇರಿಗಳ ಒಳಗೆ ನೀರು ನುಗ್ಗಿ ಕೋಟ್ಯಾಂತರ ರೂಪಾಗಳ ನಷ್ಟ ಉಂಟಾಗಿದೆ. ಆಗಾಗಿ ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಕ್ಯಾದಿಗೆಹಾಳ್ ರಾಘವೇಂದ್ರ, ಹೋಬಳಿ ಘಟಕದ ಅಧ್ಯಕ್ಷ ವಿರೇಶ್, ಸ್ಥಳಿಯ ಮುಖಂಡ ವೀರೇಶಯ್ಯಸ್ವಾಮಿ ಹಾಗೂ ಇನ್ನಿತರರು ಇದ್ದರು.