ಕುರುಗೋಡು 12: ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಮದ ನಿವಾಸಿ ಜಿ.ಪಂಪನಗೌಡ(30) ಶನಿವಾರ ರಾತ್ರಿ ಮನೆಗೆ ನೀರು ಏರಿಸಲು ಮೋಟರ್ ಕಲೇಕ್ಷನ್ ಕೊಡಲು ಹೋದಾಗ ವಿದ್ಯುತ್ ಶಾಟ್ ಸಕ್ಯರ್ೂಟ್ ಆಗಿ ಮೃತ ಪಟ್ಟ ಘಟನೆ ಜರುಗಿದೆ. ಮೃತನ ಹೆಂಡ್ತಿ ಶಶಿಕಲಾ ರೋದಿಸುತ್ತಿರುವ ಆಂಕ್ರದನ ಮುಗಿಲು ಮುಟ್ಟಿದೆ ಹೆಣ್ಮಕ್ಳನ್ನ ಹೆಂಗಾ ನೋಡ್ಕೊಳ್ಳಿ ದೇವ್ರೇ ನೀನೇ ಗತಿ ಎಂದು ಅಳು ನಿಲ್ಲಿಸದೆ ರೋದಿಸುತ್ತಿದ್ದಳು.
ಈ ಸಂದರ್ಭದಲ್ಲಿ ಕುರುಗೋಡಿನ ಆರೋಗ್ಯ ಸಮುದಾಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕುಟುಂಬದವರು ಮತ್ತು ಸಂಬಂದಿಕರು ಮೃತನನ್ನ ನೋಡಿ ರೋದಿಸುತ್ತಿರುವದನ್ನು ಕಂಡರೆ ಚಿಕ್ಕ ಹುಡುಗನಿಗೆ ಈ ರೀತಿಯಾಯಿತು ಅಂತ ಕರಳು ಚುರುಕ್ ಎನ್ನುತ್ತಿದೆ ಎನ್ನುತ್ತಿದ್ದಾರೆ.
ಮೃತನು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎತ್ತುಗಳ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ತುಂಬಾ ಒಳ್ಳೆಯ ಮನುಷ್ಯ ಯಾರಿಗೂ ಅನ್ಯಾಯ ಮಾಡಿದ ವ್ಯಕ್ತಿ ಅಲ್ಲ ಆದರೂ ಇಂತಹ ಮನುಷ್ಯನಿಗೆ ಇದ್ದಕ್ಕಿದ್ದಂತೆ ವಿದ್ಯುತ್ ಶಾಟ್ ಸಕ್ಯರ್ೂಟ್ನಿಂದ ಮೃತಪಟ್ಟಿದ್ದನು ಕಂಡು ಹೆಂಡ್ತಿ ಮತ್ತು ಎರಡು ಚಿಕ್ಕ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮೃತನಿಗೆ ಹೆಂಡತಿ, ಎರಡು ಹೆಣ್ಣುಮಕ್ಕಳು, ತಾಯಿ, ಅಣ್ಣತಮ್ಮಂದಿರು, ಕುಟುಂಬ ವರ್ಗದವರು ಹಾಗೂ ಸಂಬಂದಿಕರನ್ನು ಅಗಲಿದ್ದಾನೆ.