ಕೊಪ್ಪಳ 06: ಕನರ್ಾಟಕ ರಾಜ್ಯ ವಕಿಲರ ಪರಿಷತ್ ಚುನಾವನೆಯಲ್ಲಿ ರಾಜ್ಯ ಪರಿಷತ್ ಸದಸ್ಯರ ಸ್ಥಾನಕ್ಕೆ ಸ್ಫಧರ್ಿಸಿದ್ದ ಕೊಪ್ಪಳದ ಹಿರಿಯ ನ್ಯಾಯವಾದಿ ಎಸ್. ಆಸಿಫ್ ಅಲಿಯವರು ಗೆಲುವು ಸಾಧಿಸುವುದರ ಮೂಲಕ ವಕೀಲರ ರಾಜ್ಯ ಪರಿಷತ್ಗೆ ನೂತನ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಆಸಿಪ್ ಅಲಿಯವರು ರಾಜ್ಯ ನೋಟರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕೊಪ್ಪಳದಲ್ಲಿ ಜಿಲ್ಲಾ ಸರಕಾರಿ ವಕೀಲರು ಆಗಿಯೂ ಸಹ ಸೇವೆ ಸಲ್ಲಿಸುತ್ತ ಸಾಮಾನ್ಯ ಕಕ್ಷಿದಾರ ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫಲಿತಾಂಶ ಹೊರಬೀಳಿದ ಬಳಿಕ ಕೊಪ್ಪಳದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಂಭ್ರಮಾಚರಣೆ ನಡೆಸಿ ಎಸ್. ಆಸಿಫ್ ಅಲಿಯವರಿಗೆ ಸನ್ಮಾನಿಸಿದರು ಅಲ್ಲದೆ ಅವರ ಸ್ನೇಹಿತರ ಬಳಗ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹ ಸಂಭ್ರಮಾಚರಣೆ ನಡೆಸಿ ಪಟಾಕಿ ಸಿಡಿಸಿ ಸಿಹಿ ಹಂಚಿಸಿ ವಜಯೋತ್ಸವ ಆಚರಿಸಿದರು.
ಕನರ್ಾಟಕ ರಾಜ್ಯ ವಕಿಲರ ಪರಿಷತ್ಗೆ ನೂತನ ಸದಸ್ಯರಾಗಿ ಜಯಗಳಿಸಿದ ಎಸ್ ಆಸಿಫ್ ಅಲಿಯವರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ ತನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೆ ಅಭಿನಂದಿಸಿದ ಅವರು ವಕೀಲರ ಸಂಘದ ಅಭಿವೃದ್ಧಿ ಕೆಲಸ ಮತ್ತು ಸಂಘಟನೆಯ ಕೆಲಸಕ್ಕೆ ಹೆಚ್ಚಿನ ಆಧ್ಯತೆ ನೀಡಿ ಶ್ರಮಿಸುವೆ ಹಾಗೂ ನನಗೆ ನೀಡಿರುವ ಜವಾಬದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಎಸ್. ಆಸಿಫ್ ಅಲಿ ತಿಳಿಸದರು.