ಕೊಪ್ಪಳ : ಲೋಕಸಭಾ ಚುನಾವಣೆ: ಅಕ್ರಮ ತಡೆಗೆ ಸಿವಿಜಿಲ್, ಸಹಾಯವಾಣಿ ಕುರಿತು ಜನಜಾಗೃತಿ

ಕೊಪ್ಪಳ 01: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾದ ಚುನಾವಣೆ ನಡೆಸಲು ಸಿವಿಜಿಲ್ ಹಾಗೂ 1950 ಟೋಲ್ ಫ್ರೀ ಸಂಖ್ಯೆ ಅತ್ಯಂತ ಸಹಕಾರಿಯಾಗಿದ್ದು ಇದರ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು. 

1ಅವರು (ಏ.01) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಪ್ ಅಧ್ಯಕ್ಷರು, ಎಂ.ಸಿ.ಸಿ. ನೋಡಲ್ ಅಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತವೆ, ಅವುಗಳನ್ನು ತಡೆಗಟ್ಟಲು ಹಾಗೂ ಪತ್ತೆ ಹಚ್ಚಲು ಸಿವಿಜಿಲ್ ಅತ್ಯಂತ ಸಹಕಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಇದನ್ನು ಸಿದ್ದಪಡಿಸಿದೆ. ಯಾವುದೇ ನಾಗರೀಕರು ಸಿವಿಜಿಲ್ ಆಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಹೆಸರು ಇಲ್ಲದೆಯೇ ಇದರಲ್ಲಿ ಅಕ್ರಮಗಳ ಬಗ್ಗೆ ವೀಡಿಯೋ ಹಾಗೂ ಫೋಟೋಗಳನ್ನು ಕಳುಹಿಸಲು ಅವಕಾಶ ಕಲ್ಪಿಸಿದೆ. ಇದು ಜಿಲ್ಲಾ ಮಟ್ಟದಲ್ಲಿನ ಕಂಟ್ರೋಲ್ ರೂಂನಿಂದ ಅಪ್ ಲೋಡ್ ಮಾಡಿದ 15 ನಿಮಿಷಗಳಲ್ಲಿ ಪ್ಲೆಯಿಂಗ್ ಸ್ಕ್ವಾಡ್ ಆ ಸ್ಥಳಕ್ಕೆ ಜಿ.ಪಿ.ಎಸ್. ಆಧಾರಿತವಾಗಿ ತಲುಪಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ವ್ಯಾಪಕ ಅರಿವು ಮೂಡಿಸಲು ಉದ್ದೇಶಿಸಲಾಗಿದೆ ಎಂದರು. 

ಚುನಾವಣಾ ಅಕ್ರಮಗಳನ್ನು ತಡೆಯುವುವಲ್ಲಿ ಸಿವಿಜಿಲ್ ಹಾಗೂ 1950 ಪ್ರಮುಖ ಪಾತ್ರ ವಹಿಸಲಿದ್ದು ಕೊಪ್ಪಳ 08539 ಜಿಲ್ಲಾ ಕೋಡ್ ಟೈಪ್ ಮಾಡಿ 1950 ಗೆ ಕರೆ ಮಾಡಿದಲ್ಲಿ ಜಿಲ್ಲಾ ಕಂಟ್ರೋಲ್ ರೂಂನಲ್ಲಿ ಕರೆ ಸ್ವೀಕರಿಸಿ ದೂರು, ಮಾಹಿತಿ ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಇವುಗಳ ಬಗ್ಗೆ ಅರಿವು ಮೂಡಿಸಲು ತಿಳಿಸಿ ಸೆಕ್ಟರ್ ಅಧಿಕಾರಿಗಳು ಸಹ ಇದರ ಬಗ್ಗೆ ಹೆಚ್ಚಿನ ಒತ್ತು ನೀಡಿ ಜನರಿಗೆ ಅರಿವು ಮೂಡಿಸಲು ತಿಳಿಸಿದರು. 

ಜಿಲ್ಲೆಯಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಮೂಲಭೂತವಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ನೀರು, ಶೌಚಾಲಯ, ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಮತ್ತು ಪ್ರತಿ ಮತಗಟ್ಟೆಗಳಲ್ಲಿಯು ವಿಕಲಚೇತನರಿಗೆ ಅಗತ್ಯವಿರುವ ವ್ಹೀಲ್ ಚೇರ್ ಸೇರಿದಂತೆ ಇತರೆ ಪರಿಕರಗಳನ್ನು ಸಹ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಮತಗಟ್ಟೆಗಳಲ್ಲಿ 18 ವರ್ಷದೊಳಗಿನ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಪೆದ್ದಪ್ಪಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಕ್ಷಪಾಲ ಕ್ಷೀರಸಾಗರ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ ಶ್ರೀಧರ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.