ಚನ್ನಮ್ಮನ ಕಿತ್ತೂರ 31ಃ ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಚಿಡಿಯಾ ಶಾಖೆಯ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿ ಸುನೀಲ ನರಗುಂದ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ಸ್ಥಳೀಯ ಕ್ಪದಾಯ ಇಲಾಖೆಯ ಸಿಬ್ಬಂದಿಗಳು ಕಚೇರಿ ಬಂದ್ ಮಾಡಿ ಪ್ರತಿ ಪ್ರತಿಭಟನೆ ನಡೆಸಿದರು.
ದಿ. 30 ರಂದು ಕಾಯರ್ಾಲಯದ ಕೆಲಸದ ಮೇಲೆ ಸ್ಥಳೀಯ ಸ್ಟೇಟ್ ಬ್ಯಾಂಕಗೆ ತೆರಳಿದ ಗ್ರಾಮ ಲೆಕ್ಕಾಧಿಕಾರಿ ಸುನಿಲ ನರಗುಂದ ಈತನು ಸಿಬ್ಬಂದಿಗಳ ವೇತನದ ಚಕ್ಕಗಳನ್ನು ನಗದಿಕರಿಸಲು ಹೋದಾಗ ಬ್ಯಾಂಕ ಸಿಬ್ಬಂದಿ ಸ್ಪಂಧಿಸಿಲ್ಲ. ಈ ಕುರಿತು ಬ್ಯಾಂಕ್ ಸಿಬ್ಬಂದಿ ಹಾಗೂ ಸುನೀಲ ನರಗುಂದ ಮಧ್ಯ ಮಾತಿನ ಚಕುಮಕಿ ನಡೆಸಿ ಅಸಭ್ಯ ವರ್ತನೆ ತೋರಿಸಿ ಹಲ್ಲೆ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಈ ನಡೆಯನ್ನು ಖಂಡಿಸಿ ಸ್ಥಳೀಯ ತಹಶೀಲ್ಹಾದ ಆವರಣದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಹಿಸಿದರು.
ಕಂದಾಯ ಸಿಬ್ಬಂದಿಗಳಾದ ರಮೇಶ ವಿ, ಮಂಜುನಾಥ ಇಲ್ಲೂರ, ಪ್ರಸನ್ನ ಜಿ, ಅರುಣ ಅಡ್ನೂರ, ರವಿ ಅಮಾತಿ, ಬಿ ಆಯ್ ಕೊಂಡಿಕೊಪ್ಪ, ಎಸ್ ಸಿ ಸಿದ್ದನ್ನವರ, ಡಿ ಎಸ್ ಕೊಪ್ಪಳ, ಶ್ರೀದೇವಿ ಗಾಣಿಗೇರ, ದೀಪಾ ಬಡಿಗೇರ, ಎಮ್ ಎಮ್ ನೀರಲಗಿ, ಎಮ್ ಜಿ ಪತ್ತಾರ, ಎಪ್ ಎ ಮುಲ್ಲಾ, ಎಸ್ ವಾಯ್ ಮುಗಬಸವ, ಎಮ್ ಎ ಗಡಕರಿ, ವಾಚಿ್ ಬಿ ಪಾಗಾದ, ಡಿ ಜಿ ಯರಗಟ್ಟಿ, ಆರ್ ಡಿ ಜಾಧವ. ಇನ್ನೂ ಹಲವಾರು ಜನ ಸಿಬ್ಬಂದಿಗಳು ಉಪಸ್ಥಿರಿದ್ದರು.