ರಾಮದುರ್ಗ 03: ಸ್ಥಳೀಯ ಕಿಲಬನೂರ-ರಾಮದುರ್ಗ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಜು.3 ರಿಂದ ಆರಂಭವಾಗಿದ್ದು 11ರವರೆಗೆ 9 ದಿನಗಳ ಕಾಲ ಅತ್ಯಂತ ವಿಜ್ರಂಭನೆಯಿಂದ ಜರುಗಲಿದೆೆ.
ಜು. 4 ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದೇವತೆಯರ ಮೆರವಣೆಗೆ ನಂತರ ಜುನಿಪೇಟೆಯ ಗ್ರಾಮದೇವತೆಯ ಕಟ್ಟೆಯಲ್ಲಿ ವಾಸ್ತವ್ಯ. ರಾತ್ರಿ 8 ಗಂಟೆಗೆ ಭಜನಾಪದಗಳ ಸಾಗರ, ರಾತ್ರಿ 9 ಕ್ಕೆ ಕಿಲಬನೂರ ಗ್ರಾಮ ದೇವತೆಯ ಆವರಣದಲ್ಲಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ.
ಜು.5 ರಂದು ಬೆಳಿಗ್ಗೆ 9 ಗಂಟೆಗೆ ಹೊನ್ನಾಟದೊಂದಿಗೆ ಕಾಶಿಪೇಟೆಯಲ್ಲಿ ವಾಸ್ತವ್ಯ. ರಾತ್ರಿ 10.30 ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ. ಜು. 6 ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗ್ರಾಮದೇವತೆಯರ ಮೆರವಣೆಗೆ. ಸಂಜೆ 4 ಗಂಟೆಗೆ ಗ್ರಾಮದೇವತೆಯರ ರಥೋತ್ಸವ ಜರುಗುವದು. 6 ಗಂಟೆಗೆ ಕುದುರೆಬಯಲು ಮೈದಾನದಲ್ಲಿ ಧಾಮರ್ಿಕ ಉಪನ್ಯಾಸ ಕಾರ್ಯಕ್ರಮ. ನಂತರ ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ. 10 ಗಂಟೆಗೆ ತತ್ವ ಪದಗಳು ಜರುಗಲಿವೆ.
ಜು. 7 ರಂದು ಬೆಳಿಗ್ಗೆ 9 ಗಂಟೆಗೆ ಧಾಮರ್ಿಕ ಕಾರ್ಯಕ್ರಮ. ಸಂಜೆ ಭರತನಾಟ್ಯ ಕಾರ್ಯಕ್ರಮ. 9 ಗಂಟೆಗೆ ರಾತ್ರಿ 10 ಗಂಟೆಗೆ ಹಳ್ಳಿಯಿಂದ ದಿಲ್ಲಿಯವರೆಗೆ ನಾಟಕ ಪ್ರದರ್ಶನಗೊಳ್ಳುವದು.
ಜು. 8 ರಂದು ಬೆಳಿಗ್ಗೆ 9 ಕ್ಕೆ ಉಪನ್ಯಾಸ ಕಾರ್ಯಕ್ರಮ. ಸಂಜೆ 6 ಕ್ಕೆ ಭಕ್ತಿ ಗೀತೆಗಳ ಸಮ್ಮಿಲನ, 8 ಗಂಟೆಗೆ ಜಾನಪದ ಝೇಂಕಾರ, 10 ಗಂಟೆಗೆ ಪುಂಡಹಿಡಿದ ಗಂಡಗೊಡಲಿ ನಾಟಕ ಪ್ರದರ್ಶನಗೊಳ್ಳುವದು.
ಜು. 9 ರಂದು ಬೆಳಿಗ್ಗೆ 9 ಕ್ಕೆ ಧಾಮರ್ಿಕ ಉಪನ್ಯಾಸ. ಸಂಜೆ 6.30 ಕ್ಕೆ ಜಾದೂ ಹಾಸ್ಯ, ರಾತ್ರಿ 8.30 ಕ್ಕೆ ಗಾಯನ ನೃತ್ಯ. ರಾತ್ರಿ 10.30 ಕ್ಕೆ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ನಾಟಕ.
ಜು.10 ರಂದು ಬೆಳಿಗ್ಗೆ 9 ಕ್ಕೆ ಕಲ್ಲು ಸಿಡಿ ಒಡೆಯುವ ಸ್ಪಧರ್ೆ. ಸಂಜೆ 7 ಗಂಟೆಗೆ ದೊಳ್ಳಿನ ಪದಗಳು. ರಾತ್ರಿ 9 ಗಂಟೆಗೆ ಉಪನ್ಯಾಸ. 10 ಕ್ಕೆ ಹಾಸ್ಯ ಸಂಜೆ. 10.30 ಕ್ಕೆ ಡೊಳ್ಳಿನ ಪದಗಳ ವಾದ ಸಂವಾದ ಕಾರ್ಯಕ್ರಮ.
ಜು.11 ರಂದು ಬೆಳಿಗ್ಗೆ 10 ಗಂಟೆಗೆ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ. ಸಂಜೆ 4 ಗಂಟೆಗೆ ದೇವಿಯ ಸೀಮೆಗೆ ಹೋಗುವ ಕಾರ್ಯಕ್ರಮವಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.