ಲೋಕದರ್ಶನ ವರದಿ
ಕೊಪ್ಪಳ 05: ನಗರದ ಸಾಹಿತ್ಯ ಭವನದಲ್ಲಿ ರಾಬಿತೇ ಮಿಲ್ಲತ್ ಸಂಸ್ಥೆಯಿಂದ ಈದ್ ಉಲ್ ಫಿತರ್ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಈದ್ ಸೌಹಾರ್ದ ಕೂಟ ಉದ್ಘಾಟನೆ ಸಮಾರಂಭದ ಬಳಿಕ ರಾತ್ರಿ ವೇಳೆಯಲ್ಲಿ ಏರ್ಪಡಿಸಿದ ಬಹುಭಾಷಾ ಮುಶಾಯರಾ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಉದರ್ು ಹಿರಿಯ ಸಾಹಿತಿ ಕವಿ ಮಜಹರ ಮೋಹಿಯುದ್ದೀನ್ರವರು ಬರೆದ ಕವನ ಸಂಕಲನದ ಬಶಾರತ್ ಎಂಬ ಉದರ್ು ಪುಸ್ತಕವನ್ನು ಹೋರಾಟಗಾರ ಕನ್ನಡ ಸಾಹಿತಿ ಪ್ರೋ. ಅಲ್ಲಮಪ್ರಭು ಬೆಟ್ಟದೂರು ಅವರು ಪುಸ್ತಕ ಬಿಡುಗಡೆಗೊಳಿಸಿ ಇದರ ಕನ್ನಡ ಅನುವಾದ ಮಾಡಲು ಪ್ರಯತ್ನಿಸುವೆ ಮತ್ತು ಇದರ ಸದುಪಯೋಗ ಎಲ್ಲರಿಗೆ ದೊರೆಯಲಿ ಕವನ ಸಂಕಲನದಲ್ಲಿ ಇವರು ಬರೆದಿರುವ ಸೌಹಾರ್ದತೆಯ ಸಂದೇಶ ಪ್ರತಿಯೊಬ್ಬರಿಗೆ ಮಾರ್ಗದರ್ಶನವಾಗಲಿ. ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ಇದರ ಮಾರ್ಗದರ್ಶನ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉದರ್ು ಹಿರಿಯ ಸಾಹಿತಿ ಕವಿ ಮಜಹರ ಮೋಹಿಯುದ್ದೀನ್ರವರು ವಹಿಸಿದ್ದರು. ಉದರ್ು, ಕನ್ನಡ, ಹಿಂದಿ ಭಾಷೆಯಲ್ಲಿ ಕವಿಗಳು ತಮ್ಮ ಕವನವಾಚನ ಮಾಡಿ ಜನಮನ ರಂಜಿಸಿದರು. ಉದರ್ು ಕವಿಗಳ ಪೈಕಿ ಅನ್ವರ ಮತ್ತು ಎಂ.ವಿಜಾರತ್ ಅಲಿ ತಾಯೇರ್ ಕವನ ವಾಚನ ಮಾಡಿದರೇ ಅಲ್ಲಮಪ್ರಭು ಬೆಟ್ಟದೂರು ಮತ್ತು ಗೌಸ್ ಸಾಬ ಗೇಟಿನ ಕನ್ನಡ ಕವನ ವಚನ ಮಾಡಿದರು. ಪ್ರೋ.ದಯಾನಂದ ಸಾಂಳೋಂಕಿ ಹಿಂದಿ ಕವನ ವಚನ ಮಾಡಿದರು. ಗದುಗಿನ ಖದೀರ್ ಅಹ್ಮದ್ ಖದೀರ್ರವರು ತಮ್ಮ ಉದರ್ು ಕವನ ವಾಚನ ಮಾಡುವುದರ ಜೊತೆಗೆ ಕಾರ್ಯಕ್ರಮ ನಿರೂಪಿಸಿಸಿ, ಕೊನೆಯಲ್ಲಿ ವಂದಿಸಿದರು.