ಕಾರವಾರ: ದೇಶದ ಭದ್ರತೆಯಲ್ಲಿ ಸಿಐಎಸ್ಎಫ್ ಪಾತ್ರ ಬಹುಮುಖ್ಯ: ಕಮಾಂಡೆಂಟ್

ಕಾರವಾರ: ದೇಶದ ಭದ್ರತೆಯಲ್ಲಿ ಸಿಐಎಸ್ಎಫ್ ಪಾತ್ರ ದೊಡ್ಡದು. ದೇಶದ ಪ್ರತಿಷ್ಠಿತ ಏರ್ಪೋರ್ಟಗಳು , ಕೈಗಾ ಸೇರಿದಂತೆ ವಿವಿಧ ಬೃಹತ್ ಉದ್ಯಮಗಳಿಗೆ ರಕ್ಷಣೆ ಕೊಟ್ಟ ಹೆಮ್ಮೆ ನಮ್ಮದು ಎಂದು ಅವರು ಹೇಳಿದರು. ಕೈಗಾ ಟೌನ್ಶಿಪ್ ಆವರದಲ್ಲಿನ ಸಿಐಎಸ್ಎಫ್ ಕಚೇರಿ ಬಳಿ ರವಿವಾರ ರಾತ್ರಿ ನಡೆದ ಸಿಐಎಸ್ಎಫ್ಗೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. 

ದೇಶದಲ್ಲಿ  ಸಿಐಎಸ್ಎಫ್ 346 ಯುನಿಟ್ಸ ಹೊಂದಿದೆ. 61 ಏರ್ ಪೋರ್ಟಗಳಿಗೆ ಭದ್ರತೆ ನೀಡಿದ್ದೇವೆ. ದೆಹಲಿ ಮೆಟ್ರೋಗೆ ರಕ್ಷಣೆ ಸಿಐಎಸ್ಎಫ್ ಸಿಬ್ಬಂದಿಯದು ಎಂದರು. ಪ್ರಕೃತಿ ವಿಕೋಪ ತಡೆಗೆ ಚೆನ್ನೈನಲ್ಲಿ  ಸಿಐಎಸ್ಎಫ್  ತುಕಡಿ ಇದೆ. ಅಲ್ಲದೇ ಪಾರಂಪರಿಕ ತಾಣಗಳಿಗೆ ಸಹ  ಸಿಐಎಸ್ಎಫ್ ಯೋಧರು ರಕ್ಷಣೆ ನೀಡುತ್ತಿದ್ದಾರೆ ಎಂದರು. 1969ರಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ಕೈಗಾರಿಕಾ ವಯಲ ರಕ್ಷಣೆಗೆ ಪ್ರತ್ಯೇಕ  ಸಿಐಎಸ್ಎಫ್ ಹುಟ್ಟಿ ಹಾಕಿದರು. ಅದು ಇಂದು 1.56 ಒಟ್ಟು ಸಿಬ್ಬಂದಿಯನ್ನು ಹೊಂದಿದೆ ಎಂದರು. ಸಹಾಯಕ ಕಮಾಂಡೆಂಟ್ ಎ.ಕೆ.ಶಮರ್ಾ, ಕೈಗಾ ಘಟಕದ ನಿದರ್ೇಶಕ ದೇಶಪಾಂಡೆ, ಸನತ್ಕುಮಾರ್, ಮೋಹನ್ ರಾಂ, ಕದ್ರಾ ವಲಯದ ಆರ್ಎಫ್ಓ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.  ಸಿಐಎಸ್ಎಫ್ ಯೋಧರು ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹರಿಯಾಣ, ಬಂಗಾಲಿ, ಅಸ್ಸಾಮಿ, ಕನ್ನಡ, ಹಿಂದಿ ಭಾಷೆಯಲ್ಲಿ ಹಾಡು ಹಾಗೂ ಸಂಪ್ರದಾಯಿಕ ನೃತ್ಯಗಳ ಪ್ರದರ್ಶನ ಮಾಡಿ ಪ್ರೇಕ್ಷಕರ ಮನ ಗೆದ್ದರು. ರೂಪಕ, ಮಿಮಿಕ್ರಿ, ಜಾಧು ಸಹ ಏರ್ಪಟ್ಟಿತ್ತು.