ಲೋಕದರ್ಶನ ವರದಿ
ಕಂಪ್ಲಿ 05: ವಿಶ್ವಕರ್ಮ ಸಮಾಜ ಸಂಘದವರು ಶ್ರೀಕಾಳಿಕಾ ಕಮಠೇಶ್ವರ ದೇವಸ್ಥಾನದ ವಿಶ್ವಕರ್ಮ ಭವನದಲ್ಲಿ ದಸರಾ ನಿಮಿತ್ತ ಶುಕ್ರವಾರ ರಾತ್ರಿ ಪ್ರಸ್ತುತಪಡಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನರೆದಿದ್ದವರ ಮನಸೆಳೆದವು.
ವೀಣಾ ಮೌನೇಶ್ ತಂಡದವರಿಂದ ಕೋಲಾಟ, ಮಕ್ಕಳಿಂದ ವಿಶ್ವಕರ್ಮ ಪಂಚ ವೃತ್ತಿ ಕೌಶಲ ಪ್ರದರ್ಶನ, ಭರತನಾಟ್ಯ, ಕೂಚುಪುಡಿ ನೃತ್ಯ ಸೇರಿದಂತೆ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನವರಾತ್ರಿ ಪ್ರಯುಕ್ತ ಕಾಳಿಕಾದೇವಿ ಮೂತರ್ಿಗೆ ಭಕ್ತರ ಸಮ್ಮುಖದಲ್ಲಿ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವರವಿಯ ಶ್ರೀಶೈಲಾಚಾರ್ಯ ಹನುಮಂತಾಚಾರ್ಯ ಅವರ ಶ್ರೀದೇವಿ ಪುರಾಣ ಪ್ರವಚನ, ಸಂಗೀತಕ್ಕೆ ಎಂ.ನಾಗರಾಜಾಚಾರ್ ತಬಲಸಾಥ್ ನೀಡಿದರು ವಿಶ್ವಕರ್ಮ ಸಂಘದ ಅಧ್ಯಕ್ಷ ರುದ್ರಪ್ಪ ಆಚಾರ್, ಕಾರ್ಯದಶರ್ಿ ಮೌನೇಶ್, ಯುವಕ ಮಂಡಳಿ ಅಧ್ಯಕ್ಷ ರವಿ, ಮಹಿಳಾ ಮಂಡಳಿ ಪದಾಧಿಕಾರಿಗಳಾದ ವೀಣಾ, ರಶ್ಮಿ, ಪೂಜಾ, ಚೇತನಾ, ರಂಜನಾ, ಅನುಷಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.