ಕಂಪ್ಲಿ: ಪಂಪ್ಹೌಸ್ ಮೋಟಾರ್ ದುರಸ್ತಿಗೊಳಿಸುವ ಕಾರ್ಯಮಕ್ಕೆ ಅಧಿಕಾರಿಗಳ ಭೇಟಿ

ಲೋಕದರ್ಶನ ವರದಿ

ಕಂಪ್ಲಿ 16: ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿನ ಕುಡಿಯವ ನೀರು ಮೇಲೆತ್ತುವ ಪಂಪ್ಹೌಸ್ನಲ್ಲಿ ಮೋಟಾರ್ ದುರಸ್ತಿಗೊಳಿಸುವ ಕಾರ್ಯವನ್ನು ಪುರಸಭೆ ಅಧ್ಯಕ್ಷ ಎಂ ಸುಧೀರ ಹಾಗೂ ಮುಖ್ಯಾಧಿಕಾರಿ.ಎನ್.ಶಿವಲಿಂಗಪ್ಪ ವೀಕ್ಷಿಸಿದರು. 

ಪಂಪ್ಹೌಸ್ಗೆ ಸ್ಥಳಕ್ಕೆ ಭೇಟಿ ನೀಡಿ ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ಮಾತನಾಡಿಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮಕೈಗೊಂಡಿದೆ   

ನಗರದಲ್ಲಿ ಕಳೆದ ಎರಡು ದಿನದಿಂದ  ಜಾಕವೆಲ್ ಹಾಗೂ ನೀರೆತ್ತುವ ಪಂಪ್ನ 75ಎಚ್.ಪಿ ಮೋಟರ್ನಲ್ಲಿ ತಾಂತ್ರಿಕದೋಷ ಕಂಡು ಬಂದಿದೆ. ಇದರಿಂದ ಪಟ್ಟಣದಲ್ಲಿ ನೀರು ಸರಬರಾಜು  ವ್ಯತ್ಯಯ ಉಂಟಾಗಿದೆ. ಕೂಡಲೇ ತಾಂತ್ರಿಕದೋಷ ಸರಿಪಡಿಸಲು ಮೋಟರ್ರ ದುರಸ್ಥಿ ಮಾಡಿಸಲಾಗಿದೆ ಪಟ್ಟಣದಲ್ಲಿ ಕುಡಿಯವ ನೀರು ಸರಬರಾಜ ಅಗುತ್ತಲ್ಲಿದೆ ಎಂದರು.   

    ಪುರಸಭೆ ಅಧ್ಯಕ್ಷ ಎಂ.ಸುಧೀರ್ ಮಾತನಾಡಿ, ನೀರು ಮೇಲೆತ್ತುವ   ನೀರು ಪೂರೈಸುವ 75ಎಚ್.ಪಿ.ಮೋಟರ್ನಲ್ಲಿ ಪದೇ.ಪದೇ ತಾಂತ್ರಿಕ ದೋಷ ಕಂಡುಬರುತ್ತದೆ ಆದ್ದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ನೀರು ಸರಬರಾಜು ಸಿಬ್ಬಂದಿಗಳು ಮೋಟಾರ್ ದುರಸ್ತಿಗೊಳಿಸುವಲ್ಲಿ ಮುಂದಾಗಿದ್ದಾರೆ. ನೀರು ಪೂರೈಕೆ ಸಮಸ್ಯೆ ತಲೆದೋರದಂತೆ ನೂತನ 75ಎಚ್ಪಿ ಮೋಟರ್ ಖರೀದಿಸಲು ತೀರ್ಮಾನಿಸಿದ್ದು  ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು. 

ಪಂಪ್ಹೌಸ್ಗೆ ಭೇಟಿ ನೀಡಿ, ನೀರು ಸಂಗ್ರಹಣ ಘಟಕ ಹಾಗೂ ಫಿಲ್ಟರ್ಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳು ಇದ್ದರು