ಲೋಕದರ್ಶನ ವರದಿ
ಕಂಪ್ಲಿ 23: ತುಂಗಭದ್ರಾ ಸೇತುವೆ ಮುಳುಗಿ ಕಂಪ್ಲಿಮತ್ತು ಗಂಗಾವತಿಗೆ ಸಂಪರ್ಕ ಕಡಿತಗೊಂಡಿತು.ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 1.28ಲಕ್ಷ ಕ್ಯೂಸೆಕ್ಸ್ನಷ್ಟು ನೀರು ಹರಿದು ಬರುತ್ತಿದೆ ಪಾದಚಾರಿ, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.ೆ ನದಿ ಪಾತ್ರದಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ಡಂಗುರ ಹಾಕಿಸುವುದು ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ ಗೌಸಿಯಾ ಬೇಗಂ ತಿಳಿಸಿದರು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪ ತಹಶೀಲ್ದಾರ ಬಿ.ರವೀಂದ್ರಕುಮಾರ್, ಪಿಎಸ್ಐ ಮೌನೇಶ್ ರಾಥೋಡ್, ಕಂದಾಯ ನಿರೀಕ್ಷಕ ಎಸ್.ಎಸ್.ತಂಗಡಗಿ, ಗ್ರಾಲೆಗಳಾದ ಗಿರೀಶ್, ಆತೀಫ್ ಸೇರಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕಂದಾಯ, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.