ಕಂಪ್ಲಿ: ವಿದ್ಯಾರ್ಥಿ ಮಂತ್ರಿ ಮಂಡಲ ಚುನಾವಣೆ

ಲೋಕದರ್ಶನ ವರದಿ

ಕಂಪ್ಲಿ 07: ಪ್ರತಿಯೊಂದು ಶಾಲೆಯಲ್ಲಿ  ಮಕ್ಕಳಿಗೆ ಚುನಾವಣೆಯಲ್ಲಿ ನಡೆಯವ ಮತದಾನ ಹಕ್ಕಿನ ಪ್ರಾಮುಖ್ಯತೆ, ರಾಜ್ಯದಲ್ಲಿ ನಡೆಯವ ವಿಧಾನಸಭೆ ಮತ್ತು ಲೋಕಸಭೆಯ ಮತದಾನ ಬಗ್ಗೆ ತಿಳಿದು ಕೊಳ್ಳಲ್ಲಿಕ್ಕೆ  ಶಾಲೆಯಲ್ಲಿ  ಹಮ್ಮಿಕೊಳ್ಳಬೇಕು.ಬ್ರೇಟ್ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ  ಮಂತ್ರಿ ಮಂಡಲ ಚುನಾವಣೆ ಹಮ್ಮಿಕೊಂಡಿದೆ ಎಂದು ಬ್ರೈಟ್ ವೇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ ಹೇಳಿದರು. 

ಬ್ರೈಟ್ ವೇ ಆಂಗ್ಲಮಾಧ್ಯಮ ಶಾಲೆ ಆವರಣದಲ್ಲಿ ನಡೆದ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ  ಮಂತ್ರಿ ಮಂಡಲ ಚುನಾವಣೆಗೆ ಮತದಾನಚಾಲನೆ ನೀಡಿ, ಮತದಾನದ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ.ಅದನ್ನು ಯಾರು ಕಳೆದು ಕೊಳ್ಳಬಾರದುಪ್ರಜಾಪ್ರಭುತ್ವವನ್ನ ಸುಭದ್ರವಾಗಿ ಬಲಪಡಿಸಲು ಸಾಧ್ಯ ಅದನ್ನು ಮಕ್ಕಳಲ್ಲಿ ಪ್ರೇರೇಪಿಸಬೇಕಾಗಿದೆ. ಮತದಾನವನ್ನು ಸ್ವಯಂ ಪ್ರೇರಿತವಾಗಿ ಕಡ್ಡಾಯವಾಗಿ, ನಿರ್ಭಿತಿಯಿಂದ  ಮತದಾನ ಮಾಡುವುದು ಬೇಕು ವಿದ್ಯಾರ್ಥಿ  ಮಂತ್ರಿ ಮಂಡಲ ಚುನಾವಣೆ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. 

ಪ್ರಧಾನ ಮಂತ್ರಿ, ಮಾಹಿತಿ ತಂತ್ರಜ್ಞಾನ, ಹಣಕಾಸು, ಅರಣ್ಯ ಮತ್ತು ತೋಟಗಾರಿಕ3ಎ, ಶಿಕ್ಷಣ, ಮಾನವ ಸಂಪನ್ಮೂಲ, ಕ್ರೀಡೆ, ಸಾಂಸ್ಕೃತಿಕ ಸೇರಿ ಒಟ್ಟು ಒಂಬತ್ತು ಸ್ಥಾನಗಳಿಗಾಗಿ ಚುನಾವಣೆ ಜರುಗಿದ್ದು, 28ವಿದ್ಯಾಥರ್ಿಗಳು ಸ್ಪಧರ್ಿಸಿದ್ದರು. 370ವಿದ್ಯಾರ್ಥಿಗಳು , ಶಿಕ್ಷಕರು, ಆಡಳಿತ ಮಂಡಳಿಯವರು ಮತ ಚಲಾಯಿಸಿದರು. 

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಕಾರ್ಯದಶರ್ಿ ಉಗಾದಿ ಶಿವರಾಜ್, ಖಜಾಂಚಿ ವೈ.ವೆಂಕಟೇಶ್, ಮುಖ್ಯಗುರು ವಿಜಯಲಕ್ಷ್ಮಿ, ಶಿಕ್ಷಕರಾದ ರೋಷನ್ ಜಮೀರ್, ಬಸವರಾಜ್, ಅನುಪಮ, ಎಸ್.ಶ್ಯಾಂಸುಂದರ್, ಚಂದ್ರಶೇಖರ್ ಸೇರಿ ಬೋಧಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.