ಲೋಕದರ್ಶನ ವರದಿ
ಕಂಪ್ಲಿ 15: ಸಮೃದ್ಧ ಮಳೆ ಮತ್ತು ಬೆಳೆಗಾಗಿ ಲೋಕಕಲ್ಯಾಣಾರ್ಥ ಕಂಪ್ಲಿ ಕೋಟೆಯ ಹೊಳೆ ಬಸವಣ್ಣ ಗಂಗೆಸ್ಥಳ ಶ್ರದ್ಧಾಭಕ್ತಿಗಳಿಂದ ಜರುಗಿತು.
ಹೊಳೆ ಬಸವಣ್ಣನ ಗಂಗೆಸ್ಥಳ ಮೆರವಣಿಗೆಯಲ್ಲಿ ಸರ್ವ ಸಮುದಾಯಗಳ ರೈತಾಪಿ ವರ್ಗದವರು, ಸದ್ಭಕ್ತರು, 51ಜೋಡಿ ಅಲಂಕೃತ ಎತ್ತುಗಳು, ಡೊಳ್ಳುಕುಣಿತ, ಭಜನಾವೃಂದ, ಮಂಗಳವಾಧ್ಯಗಳು, ತಾಷಾರಾಂಡೋಲ್, ಬಾಲೆಯರ ಕಳಸಾಧಾರತಿಗಳು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು. ಕೋಟೆಯ ತುಂಗಭದ್ರಾನದಿಯ ಗಂಗಮ್ಮನ ಕಟ್ಟೆಯಿಂದ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಕೋಟೆಯ ಪ್ರಮುಖ ಬೀದಿಗಳಲ್ಲಿ ಸಾಗಿತು. ಇದಕ್ಕೂ ಮುನ್ನಾ ನದಿಯಲ್ಲಿನ ಬಸವಣ್ಣನ ಮೂತರ್ಿಗೆ ಅಲಂಕಾರ ಸೇರಿ ನಾನಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಮುಂಚಿನಿಂದಲೂ ಸಮೃದ್ಧ ಮಳೆ, ಬೆಳೆ ಮತ್ತು ಲೋಕಕಲ್ಯಾಣಾರ್ಥ ಹೊಳೆ ಬಸವಣ್ಣನ ಗಂಗೆಸ್ಥಳ ಮೆರವಣಿಗೆ ಜರುಗಿಸಲಾಗುತ್ತಿದೆ. ಹೊಳೆ ಬಸವಣ್ಣನ ಗಂಗೆಸ್ಥಳದಿಂದ ಸಮೃದ್ದ ಮಳೆ, ಬೆಳೆ ಲಭಿಸುವುದೆಂಬ ನಂಬಿಕೆ ಇದೆ ಎಂದು ಕೋಟೆಯ ಸದ್ಭಕ್ತರು ಹೇಳಿದರು.
ಗಂಗೆಸ್ಥಳ ಮೆರವಣಿಗೆಯಲ್ಲಿ ಕಟ್ಟೆ ಅಯ್ಯಪ್ಪ, ಮಣ್ಣೂರು ನಾಗರಾಜ, ಕಟ್ಟೆ ಸಣ್ಣ ದುರುಗಪ್ಪ, ಕೋಲಕಾರ್ ಮಲ್ಲೇಶಪ್ಪ, ಮಣ್ಣೂರು ಶರಣಪ್ಪ, ಹುಗ್ಗಿ ನಾಗಪ್ಪ, ಮಣ್ಣೂರು ಶಿವಪ್ಪ, ಲಡ್ಡು ಹೊನ್ನೂರ್ವಲಿ, ಎಚ್.ಪಾಂಡುರಂಗ, ಕಂಬತ್ತು ಸಿದ್ದಪ್ಪ, ಬಾಳೆಕಾಯಿ ಮಕ್ಬುಲ್, ತಾಳೂರು ಗೌಸ್, ಡಾ.ವಿ.ಎಲ್.ಬಾಬು, ಗೆಜ್ಜೆಳ್ಳಿಭಾಷಾ, ಕಾಮಗಂಡಿ ಗವಿಸಿದ್ದಪ್ಪ, ಸೆರೆಗಾರ್ ನಾಗರಾಜ, ಬಾಗ್ಲಿರಾಜ, ಬಾಗ್ಲಿ ಸೂರ್ಯ, ಗಂಜಿ ಪಂಪಾಪತಿ, ಹೊಸಪೇಟೆ ಮುಕ್ಕಣ್ಣ, ಗುಡದೂರು ರಾಘವೇಂದ್ರ, ಬಾಗ್ಲಿ ಈರಣ್ಣ, ಬಾರಿಕೇರ್ ಮಾರುತಿ, ಬಾಗ್ಲಿ ಉಮೇಶ್, ಪಲ್ಲೇದ್ ಪ್ರಕಾಶ್, ಕಂಬತ್ತು ಈರಪ್ಪ, ಮುದ್ದಾಪುರ ಲಿಂಗಜ್ಜ ಸೇರಿ ಅನೇಕರು ಪಾಲ್ಗೊಂಡಿದ್ದರು.