ಕಂಪ್ಲಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಕಂಪ್ಲಿ 28: ಕನರ್ಾಟಕ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ ಮತ್ತು  ಗ್ರಾಹಕ ವಸ್ತುಗಳ ವಿತರಕರ ಸಂಘ ಹಾಗೂ ಕಿರಾಣಿ ವರ್ತಕರ ಕಂಪ್ಲಿ ತಾಲೂಕು ವಿತರಕರ ಸಂಘಗಳು  ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಂಟುಗಳನ್ನು ಬಂದ್ ಮಾಡಿ ವಿವಿಧ ಬೇಡಿಕೆಗಳಿಗಾಗಿಶುಕ್ರವಾರ ಪ್ರತಿಭಟಿಸಿದರು. 

ವಿವಿಧ ಅಂಗಡಿ ವ್ಯಾಪಾರಸ್ಥರು, ವಿತರಕರು ಸ್ವಯಂಪ್ರೇರಿತರಾಗಿ ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ, ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಉಮೇಶ್ ರಾಥೋಡ್, ನಾಡ ಕಚೇರಿಯ ಉಪತಹಶೀಲ್ದಾರ ಬಿ.ರವೀಂದ್ರಕುಮಾರ್ ಇವರಿಗೆ ಮನವಿ ಸಲ್ಲಿಸಿದರು. ಅನೇಕ ಪ್ರತಿಭಟನಾಕಾರರು ಮಾತನಾಡಿ, ಆನ್ಲೈನ್  ಅಸಂಬದ್ದ ರಿಯಾಯ್ತಿಗಳನ್ನು ತೆಡೆಯುವ  ನಿಯಮಾವಳಿಗಳನ್ನು ರೂಪಿಸುವುದು. ಚಿಲ್ಲರೆ ವ್ಯಾಪಾರದಲ್ಲಿ ವಿತರಕರ ನಿಗಮು ಮಂಡಳಿ ರೂಪಿಸುವುದು  ಚಿಲ್ಲರೆ ವ್ಯಾಪಾರ ವರ್ತಕ ಮತ್ತು ವಿತರಕರಿ ಬ್ಯಾಂಕ್ ಸಾಲದ ಬಡ್ಡಿ ಧರ ಕಡಿತಗೂಳಿಸಿಬೇಕು  

ಜಿ.ಎಸ್.ಟಿ. ಪಾವತಿದಾರರಿಗೆ ಉಚಿತ ವಿಮೆ ಕಲ್ಪಿಸುವುದು. ಹೊಸ ಆನ್ಲೈನ್ ಮಾಲ್ ರೀಟೀಲರಿಗೆ ಅವಕಾಶ ಕೊಡಬಾರದು  ವ್ಯಾಪಾರಸ್ಥರ ಉಳಿವಿಗಾಗಿ ಆನ್ಲೈನ್ ಮೂಲಕ ದಿನಬಳಕೆ ವಸ್ತುಗಳು, ಔಷಧಿಯ ವಸ್ತುಗಳು ಅತಿ ರಿಯಾಯ್ತಿ ಧರದಲ್ಲಿ ಮಾರಾಟ ನಿಷೇಧಿಸುವ ಕಟ್ಟುನಿಟ್ಟಾದ ನೀತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು  ಪ್ರತಿಭಟನೆಯಲ್ಲಿ ಕಂಪ್ಲಿ ತಾಲೂಕು ವಿತರಕರ ಸಂಘದ ಅಧ್ಯಕ್ಷ ಪಿ.ಸೋಮನಗೌಡ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಜಿ.ರಾಜಾರಾವ್, ಕಂಪ್ಲಿ ವರ್ತಕರ ಮತ್ತು ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಜಿ.ಸತ್ಯನಾರಾಯಣಬಾಬು, ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ನವೀನ್ ಬಾಗ್ರೇಚಾ, ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಓದ್ಸೋ ರುದ್ರಯ್ಯ, ವಿತರಕರಾದ ಉಗಾದಿ ಶಿವರಾಜ್, ಐ.ಶೇಷಪಾಣಿ, ಅಶೋಕ್, ಎಚ್.ನಾಗರಾಜ ಸೇರಿ ನಾನಾ ವ್ಯಾಪಾರಸ್ಥರು, ವಿತರಕರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿ ಪಾಲ್ಗೊಂಡಿದ್ದರು.