ಲೋಕದರ್ಶನ ವರದಿ
ಕಂಪ್ಲಿ 08: ಮಕ್ಕಳು ಶಿಕ್ಷಣದ ಜೊತೆಗೆ ನವೋದಯ ತರಬೇತಿ ಪಡೆದು ಕೊಂಡಾಗ ಮಾತ್ರ ಸರಕಾರದ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುವುದರ ಜೊತೆಗೆ ಸರಕಾರ ನೌಕರಿ.ಇನ್ನು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. 2018 ಮತ್ತು2019ನೇ ಸಾಲಿನ ನವೋದಯ ಪರೀಕ್ಷೆಯಲ್ಲಿ ಸ್ಫೂರ್ತಿ ನವೋದಯ ತರಬೇತಿ ಕೇಂದ್ರದಿಂದ ಮಾತ್ರ ಒಟ್ಟು 40 ವಿದ್ಯಾಥರ್ಿಗಳು ಆಯ್ಕೆಯಾಗಿದ್ದಾರೆ ಎಂದು ಕಂಪ್ಲಿ ಸ್ಫೂತರ್ಿ ನವೋದಯ ತರಬೇತಿ ಕೇಂದ್ರದ ಸಂಚಾಲಕ ರಮೇಶ್.ಎನ್.ಶಿವಪುರ ಹೇಳಿದರು.
ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆ ನಂ10 ಮುದ್ದಾಪುರ ಗ್ರಾ.ಪಂ ವಾಪ್ತಿಯಲ್ಲಿರುವ ಯಲ್ಲಮ್ಮ ಕ್ಯಾಂಪ್ ಹತ್ತಿರ ಸ್ಫೂತರ್ಿ ನವೋದಯ ತರಬೇತಿ ಕೇಂದ್ರದಲ್ಲಿ ಭಾನುವಾರದಂದುಏರ್ಪಡಿಸಿದ ಪೋಷಕರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ.ಮಕ್ಕಳ ಕಠಿಣ ಪರಿಶ್ರಮದಿಂದ ಅತ್ಯುನ್ನತ ಸಾಧನೆಗೈಯ್ಯಲು ಸಾಧ್ಯವಿದೆ. ತರಬೇತಿ ಕೇಂದ್ರದಲ್ಲಿ ವ್ಯಾಸಂಗ ಮಾಡಿದ್ದ ಇಬ್ಬರು ಹಳೇ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ್ದಾರೆ. ನೀಟ್ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ರೋಹಿತ್ ಹೊನ್ನಳ್ಳಿ 477ನೇ ರ್ಯಾಂಕ್ ಹಾಗೂ ಎಂ.ಎಚ್.ಕಿಶೋರ್ 18 ಸಾವಿರನೇ ರ್ಯಾಂಕ್ ಗಳಿಸುವ ಮೂಲಕಸ್ಫೂತರ್ಿ ನವೋದಯ ತರಬೇತಿ ಕೇಂದ್ರಕ್ಕೆ ಕೀತರ್ಿತದ್ದಿದ್ದಾರೆ ಇದೆ ರೀತಿ ತರಬೇತಿ ಪಡೆದ ಮಕ್ಕಳು ರ್ಯಾಂಕ್ ಗಳಿಸಲಿ ಎಂದು ಹಾರೈಸಿದರು
ಸಂಪನ್ಮೂಲ ವ್ಯಕ್ತಿ ಗಿರಿಧರ್ ಪೂಜಾರಿ ಪರ್ಸನಲ್ ಡೆವೆಲೆಪ್ಮೆಂಟ್ ರಿಸಚರ್್ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ವಿದ್ಯಾಥರ್ಿ ಹಂತದಲ್ಲಿ ಮಕ್ಕಳ ಸಾಧನೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಬೆಳೆಯುವ ಹಂತದಲ್ಲಿನ ಮಕ್ಕಳ ಮನಸ್ಥಿತಿಗನುಸಾರ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು.ಎಂದರು
ಬಳಿಕ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ತರಬೇತಿ ಕೇಂದ್ರದ ಇಬ್ಬರು ಹಳೇ ವಿದ್ಯಾಥರ್ಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ತರಬೇತಿ ಕೇಂದ್ರದ ಸಂಚಾಲಕ ಮುತ್ತಣ್ಣ ನಂದ್ಯಾಳ ಸ್ವಾಗತಿಸಿದರು. ಶಾಲಾ ವಿದ್ಯಾಥರ್ಿನಿ ಕವನ ಚಿತ್ರದುರ್ಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೀಕ್ಷಿತಾ ಹರಪನಹಳ್ಳಿ ಹಾಗೂ ತಂಡದವರು ನಿರೂಪಣೆ ಮಾಡಿದರು. ತರಬೇತಿ ಕೇಂದ್ರದ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.