ಕಂಪ್ಲಿ: ಅಕ್ರಮ ಮರಳು ಸಾಗಾಣಿಕೆ: ಲೋಕಾಯುಕ್ತ ಡಿಎಸ್ಪಿ ವೀಕ್ಷಣೆ

ಲೋಕದರ್ಶನ ವರದಿ

ಕಂಪ್ಲಿ 02: ಗ್ರಾಪಂ ವ್ಯಾಪ್ತಿಯ ನದಿ ಪಾತ್ರದಲ್ಲಿ ಮರಳು ಸಂಗ್ರಹಣ  ತುಂಗಭದ್ರಾ ನದಿಯಲ್ಲಿರುವ ಮರಳು ಅವೈಜ್ಞಾನಿಕವಾಗಿ ಮರಳನ್ನು ದಿನಾಲು ಭರದಿಂದ ಸಾಗಿಸುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು,  ಮೌನವಹಿಸಿದ್ದಾರೆ. ಅವೈಜ್ಞಾನಿಕವಾಗಿ ಮರಳು ತೆಗೆಯುವಿಕೆಯಿಂದ ತುಂಗಭದ್ರಾ ನದಿಗೆ ನಿರ್ಮಿಸಿದ  ಸೇತುವೆಗೆ ಹಾನಿಯಾಗುವ ಸಂಭವ ಇದೆ ಎಂದು ಕೊಪ್ಪಳ ಜಿಲ್ಲೆಯ ಪ್ರಭಾರ ಲೋಕಾಯುಕ್ತ ಡಿಎಸ್ಪಿ ಎಚ್.ದೊಡ್ಡಣ್ಣ ಹೇಳಿದರು 

ಮಂಗಳವಾರ ಕಂಪ್ಲಿ ತುಂಗಭದ್ರಾ ನದಿಗೆ ಭೇಟಿ ನೀಡಿ, ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ನದಿ ಪಾತ್ರದಲ್ಲಿ ಮರಳು ಸಂಗ್ರಹಣೆ, ಫಿಲ್ಟರ್, ಸಾಗಣೆ ದೃಶ್ಯವನ್ನು ವೀಕ್ಷಿಸಿ ಮಾತನಾಡಿ, ಸಕರ್ಾರಿ ಕೆಲಸಗಳಲ್ಲಿ ಲೋಪ ಕಂಡು ಬಂದಲ್ಲಿ, ಭ್ರಷ್ಟಾಚಾರ, ಅವ್ಯವಹಾರಗಳು ಕಂಡು ಬಂದಲ್ಲಿ,ಸರ್ಕಾರಿ  ಆಸ್ತಿ ಕಬಳಿಸುವ ಚಟುವಟಿಕೆಗಳು ಕಂಡು ಬಂದಲ್ಲಿ ಅದನ್ನು ಸಂಪೂರ್ಣ ನಿಯಂತ್ರಿಸಲು ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು ಲೋಕಾಯುಕ್ತರ ಕರ್ತವ್ಯವಾಗಿದೆ. 

ಈ ದಿಸೆಯಲ್ಲಿ ತುಂಗಭದ್ರಾ ನದಿಯಲ್ಲಿ, ನದಿಯ ಪಾತ್ರಗಳಲ್ಲಿ, ತುಂಗಭದ್ರಾ ನದಿಗೆ ನಿಮರ್ಿಸಿದ ಸೇತುವೆಗೆ ಹಾನಿಯಾಗುವ ರೀತಿಯಲ್ಲಿ ಹಾಗೂ ನದಿ ಪರಿಸರಕ್ಕೆ ಪೂರಕವಲ್ಲದ, ಅವೈಜ್ಞಾನಿಕವಾಗಿ ಬೇಕಾಬಿಟ್ಟಿ ಮರಳನ್ನು ನಿತ್ಯವೂ ಜೆಸಿಬಿ ಮೂಲಕ ಅಗೆದು ಟ್ರ್ಯಾಕ್ಟರ್, ಬಂಡಿಗಳ ಮೂಲಕ ಸಾಗಿಸುವ ದಂದೆ, ಅವ್ಯವಹಾರ ನಿರಂತರ ಸಾಗಿದೆ. 

ಈ ಅವ್ಯವಹಾರ ಕುರಿತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮರಳು ದಂದೆ ಅವಾ ನಿರಂತರ ಸಾಗಣೆ ಮಾಡಲಾಗುತ್ತಿದ್ದರೂ ಎಲ್ಲ ಅಧಿಕಾರಿಗಳು, ಜನಪ್ರತಿನಿದಿಗಳು, ಯಾರೋಬ್ಬರು ಈ ಕುರಿತು ಚಕಾರ ಎತ್ತುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂದಿಸಿದ ಅಧಿಕಾರಿಗಳು ಸೂಕ್ತ ನಿಗಾವಹಿಸಿ ಅಕ್ರಮ ಮರಳು ತೆಗೆಯುವಿಕೆ ಮತ್ತು ಸಾಗಾಟವನ್ನು ತಡೆಯಲು ಮುಂದಾಗಬೇಕಾಗಿದೆ. 

    ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಯವರು ಇಂದು ಸ್ಥಳ ಪರಿಶೀಲನೆ ಮಾಡಿದ್ದು, ವಸ್ತುಸ್ಥಿತಿ ವರದಿಯನ್ನು ಲೋಕಾಯುಕ್ತ ಮುಖ್ಯಸ್ಥ ಅಧಿಕಾರಿಗಳಿಗೂ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ ಪತ್ರ ವ್ಯವಹಾರ ಮೂಲಕ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ  ಹೇಳಿದರು. 

   ಈ ಸಂದರ್ಭದಲ್ಲಿ ಗಂಗಾವತಿಯ ಲೋಕೋಪಯೋಗಿ ಇಲಾಖೆಯ ಎಇ ರಾಜಪ್ಪ, ಗಂಗಾವತಿಯ ಕಂದಾಯ ನಿರೀಕ್ಷಕ ಹನುಮಂತಪ್ಪ, ಚಿಕ್ಕಜಂತಕಲ್ ಗ್ರಾಪಂ ಪಿಡಿಒ ಸೈಯ್ಯದ್ ಜಿಲಾನ್ ಭಾಷ, ಗ್ರಾಲೆ ಜ್ಯೋತಿ 

ಉಪಸ್ಥಿತರಿದ್ದರು.