ಲೋಕದರ್ಶನ ವರದಿ
ಕಂಪ್ಲಿ 25: ಸಮೀಪದ ಹೊಸದರೋಜಿ ಗ್ರಾಪಂ ಕಛೇರಿ ಆವರಣದಲ್ಲಿ, ಬುಧವಾರ ಗ್ರಾಪಂ ಅಧ್ಯಕ್ಷೆ ಎನ್.ಪಲ್ಲವಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಗ್ರಾಮ ಸಭೆಯಲ್ಲಿ ಗ್ರಾಪಂ ಪಿಡಿಒ ಅವರ ಮೇಲೆ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆಯಲ್ಲಿ ವಾಗ್ವಾದ ನಡೆಯಿತು..
ಗ್ರಾಪಂ ಉಪಾಧ್ಯಕ್ಷ ಎಂ.ಎಸ್.ಗುರುಮೂರ್ತಿ ಮಾತನಾಡಿ, ಗ್ರಾಪಂ ಕಛೇರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಪಿಡಿಒ ನಿತ್ಯ ಕಛೇರಿಗೆ ಸರಿಯಾಗಿ ಬರುತ್ತಿಲ್ಲ ಯಾವಾಗಲೋ ಗ್ರಾಮಸ್ಥರಿಗೆ ತುಂಬಾ ಅನಾನುಕೂಲವಾಗಿದೆ. ಪಂಚಾಯ್ತಿ ಸಿಬ್ಬಂದಿಯ ಕರ್ತವ್ಯದ ಮೇಲೆ ಪಿಡಿಒ ಹಿಡಿತ ಸಾಧಿಸದಿದ್ದರಿಂದ ಪಂಚಾಯ್ತಿಯಲ್ಲಿ ಯಾವುದೇ ಕೆಲಸಗಳಾಗದೆ ಜನರು ಕೆಲಸ ಬಿಟ್ಟು ಕಛೇರಿಗೆ ಅಲೆಯುವಂತಾಗಿದೆ. ಪಂಚಾಯ್ತಿ ಅವ್ಯವಸ್ಥೆ ಕುರಿತು ಜಿಪಂ ಉಪಕಾರ್ಯದಶರ್ಿ ನಂಬರ್ 2, ಚೀಫ್ ಸೆಕ್ರೆಟರಿಗೆ ಪೋನ್ ಮಾಡಿ ತಿಳಿಸಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ತಾಪಂ ಇಒ ಹೊಸದರೋಜಿ ಗ್ರಾಪಂ ಕಛೇರಿ ಕುರಿತು ನಿಗಾವಹಿಸುತ್ತಿಲ್ಲ. ಖಾಯಂ ಪಿಡಿಒ ನೇಮಕಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯ ವಿ.ರಾಮುಡು, ನಾರಾಯಣ ಮಾತನಾಡಿ, ನಾಲ್ಕು ವರ್ಷಗಳಿಂದ ಪಂಚಾಯ್ತಿಯಲ್ಲಿ ಸರಿಯಾದ ಆಡಳಿತ ನಡೆಯುತ್ತಿಲ್ಲ. ಪಿಡಿಒ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕಾಲಕ್ಕೆ ಸಭೆ ನಡೆಸುತ್ತಿಲ್ಲ, ನರೇಗಾ, ಮನೆ ಹಂಚಿಕೆ, ಚರಂಡಿ ಸೇರಿ ಮೂಲಭೂತ ವ್ಯವಸ್ಥೆಗಳಿಲ್ಲ. ವರ್ಗ1ರ ಜಮ ಖಚರ್ುಗಳಿಲ್ಲ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪಿಡಿಒ ಎಸ್.ಶ್ರೀನಿವಾಸ ಮಾತನಾಡಿ, ಇನ್ನೊಂದು ಗ್ರಾಪಂ.ಯಲ್ಲಿ ಪ್ರಭಾರೆ ಕಾರ್ಯನಿರ್ವಹಿಸುತ್ತಿದ್ದೇನೆ. ಇನ್ನು ಮುಂದೆ ಕಛೇರಿ ಸಮಯಕ್ಕೆ ಬಂದು ಸರಿಯಾಗಿ ಕಾರ್ಯನಿರ್ವಹಿಸುತ್ತೇನೆ. ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ವಸತಿ ಯೋಜನಡಿಯ ಫಲಾನುಭವಿಗಳ ಆಯ್ಕೆಗಾಗಿ ಮುಂದಿನವಾರ ಗ್ರಾಮಸಭೆ ಕರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಗ್ರಾಪಂ ಸದಸ್ಯರು, ಗ್ರಾಮಸ್ಥರನೇಕರು ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದರು.