ಕಂಪ್ಲಿ: ಕನ್ನಡ ಪರೀಕ್ಷೆಗಳಿಗೆ ಅವಕಾಶ ನೀಡಿ

ಲೋಕದರ್ಶನ ವರದಿ

ಕಂಪ್ಲಿ 19: ಬ್ಯಾಂಕ್, ಎಲ್ಐಸಿ ಸರಕಾರಿ. ಸೇರಿದಂತೆ ಪ್ರಮುಖ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಕೇಂದ್ರ ಸಕರ್ಾರ ಕನ್ನಡಿಗರಿಗೆ ಹಿಂದಿ ಹೇರುವ ಪ್ರಯತ್ನ ತೀವ್ರ ಖಂಡನೀಯ ಎಂದು ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಕರ್ಾರ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಬ್ಯಾಂಕ್ ಮತ್ತು ಎಲ್ಐಸಿಯವರು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಜನರ ಜೊತೆ ವ್ಯವಹಾರ ಮಾಡುತ್ತಾರೆ.  ಈ ಎರಡು ಇಲಾಖೆಗಳಲ್ಲಿ ನೌಕರಿ ಪಡೆಯಲು ಇಂಗ್ಲೀಷ್ ಅಥವಾ ಹಿಂದಿ ಭಾಷಾ ಪರೀಕ್ಷೆ ಎದುರಿಸಬೇಕೆಂಬ ನಿಯಮ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಜನತೆಗೆ ಮಾಡುತ್ತಿರುವ ವಂಚನೆಯಾಗುತ್ತಿದೆ. ಕೇಂದ್ರ ಸರ್ಕಾರ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು