ಕಂಪ್ಲಿ 02: ಇಲ್ಲಿಯ ಕನರ್ಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 40ಫಲಾನುಭವಿಗಳಿಗೆ ಶನಿವಾರ ಬೆಳೆ ಸಾಲ ಮಂಜೂರು ಪತ್ರ ವಿತರಿಸಲಾಯಿತು.
ಕನರ್ಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಆರ್.ದೊಡ್ಡಪ್ಪ ಮಾತನಾಡಿ, ಪ್ರತಿಯೊಬ್ಬ ರೈತರು ಬ್ಯಾಂಕಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡೆಯಿರಿ 'ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಸದುಪಯೋಗ ಪಡೆಯುವಂತೆ' ಮನವಿ ಮಾಡಿದರು.
ಬ್ಯಾಂಕ್ ವ್ಯವಸ್ಥಾಪಕ ಟಿ. ಆಂಜನೇಯ ಮಾತನಾಡಿ, '2019-20ನೇ ಸಾಲಿನಲ್ಲಿ ಬ್ಯಾಂಕ್ ರೈತರ ಕೃಷಿ ಸಾಲಕ್ಕೆ ಹೆಚ್ಚು ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೆ ಕೃಷಿಗಾಗಿ ರೂ. 8.68ಕೋಟಿ ಸಾಲ ವಿತರಿಸಿದೆ' ಎಂದು ಮಾಹಿತಿ ನೀಡಿದರುಆರ್ಥಿಕ ಸಾಕ್ಷರತಾ ಕೇಂದ್ರದ ಎಚ್. ಮಲ್ಲಪ್ಪ ಮತ್ತು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಮಾತನಾಡಿದರು.ಪ್ರಧಾನಮಂತ್ರಿಯವರು ಉತ್ತರಪ್ರದೇಶದ ಚಿತ್ರಕೂಟದಲ್ಲಿ ಕಿಸಾನ್ ಸಮ್ಮಾನ್ ಉದ್ಘಾಟಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಟಿ.ವಿ. ಮೂಲಕ ಪ್ರಸಾರ ಮಾಡಲಾಯಿತು.
ಶಾಖೆ ಕ್ಷೇತ್ರಾಧಿಕಾರಿ ರಸೂಲ್, ಸಹಾಯಕ ವ್ಯವಸ್ಥಾಪಕಿ ಅಮೃತಾ, ಸಿಬ್ಬಂದಿ
ಮನುಷಾ, ಬಾರ್ಗವಿ, ರಾಜಶೇಖರ್, ಗುರುಕೃಷ್ಣ, ಪರಶುರಾಮ, ಗ್ರಾಹಕರು, ರೈತರು ಹಾಜರಿದ್ದರು.