ಲೋಕದರ್ಶನ ವರದಿ
ಕಂಪ್ಲಿ 02: ದೇಶದಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕೆ ಇಲ್ಲವೇ ಇಲ್ಲ. ಮೋದಿ ಹವಾ ಇದ್ದು ರಾಜ್ಯದಲ್ಲಿ 24ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಾಗುವುದು. ಮೋದಿ ಮತ್ತೇ ಪ್ರಧಾನಿಯಾಗುವುದು ಖಚಿತ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು.
ಉದ್ಭವ ಮಹಾಗಣಪತಿ ದೇವಸ್ಥಾನ ಬಳಿ ಬಹಿರಂಗ ಭಾಷಣ ಮಾಡಿ, 2019ರ ಲೋಕಸಭೆ ಚುನಾವಣೆ ಪ್ರತಿಷ್ಠೆಯಿಂದ ಕೂಡಿದ್ದು, ಮೋದಿ ಚುನಾವಣೆ ಎಂದೇ ಬಿಂಬಿತವಾಗಿದೆ. ಪುಲ್ವಾಮದ ಘಟನೆಗೆ ಪ್ರತಿಕಾರವಾಗಿ ನಡೆದ ಎರಡು ಸರ್ಜಿಕಲ್ ಸ್ಟ್ರೈಕ್ಗಳನ್ನು ಕಾಂಗ್ರೆಸ್ ಅರಗಿಸಿಕೊಳ್ಳಲಾಗದೇ ಮೋದಿ ಮೇಲೆ ವಿನಾಕಾರಣ ದೂರುತ್ತಿದ್ದಾರೆ. ಕಾಂಗ್ರೆಸ್ ಪುಲ್ವಾಮ ಘಟನೆಯನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಶಾಸಕ ಟಿ.ಎಚ್.ಸುರೇಶ್ಬಾಬು ಮಾತನಾಡಿ, ನನ್ನ 10ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ದಿಯಾಗಿದೆ. ನನ್ನ ಅವಧಿಯ ಕಾಮಗಾರಿಗಳಿಗೆ ಮತ್ತೇ ಪೂಜೆ ಮಾಡುತ್ತಿದ್ದಾರೆ. ಹೊಸ ಅನುದಾನಗಳಿಲ್ಲ. ಚುನಾವಣೆ ಮಹತ್ವ ಪಡೆದಿದ್ದು, ಮೋದಿಯ ಕೈಬಲಪಡಿಸಲು ಬಿಜೆಪಿ ಅಭ್ಯಥರ್ಿಗೆ ಮತ ನೀಡಿ ಎಂದರು.
ಈ ಸಂದರ್ಭಗಳಲ್ಲಿ ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಎನ್.ಪುರುಷೋತ್ತಮ, ಕೊಡಿದಲ ರಾಜು, ಬಿ.ಸಿದ್ದಪ್ಪ, ಜಿ.ರಾಮಣ್ಣ, ಎನ್.ಚಂದ್ರಕಾಂತರೆಡ್ಡಿ, ಡಾ.ವೆಂಕಟೇಶ ಭರಮಕ್ಕನವರ್, ಡಿ.ಶ್ರೀಧರಶ್ರೇಷ್ಠಿ, ನಾಗೇಂದ್ರ, ಎಂ.ಯಶೋಧಮ್ಮ, ಜ್ಯೋತಿ, ಜುಬೀನಾ ಸೇರಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.