ಕಂಪ್ಲಿ: 850 ಜನರಿಗೆ ನರೇಗಾದಡಿ ಉದ್ಯೋಗ

ಲೋಕದರ್ಶನ ವರದಿ

ಕಂಪ್ಲಿ 13: ಪ್ರಸ್ತುತ ಆರ್ಥಿಕ  ವರ್ಷದಿಂದಲೇ ಪರಿಷ್ಕೃತ ತೆರಿಗೆ ವಸೂಲಿ ಮಾಡಲು ತೀಮರ್ಾನಿಸಲಾಗಿದೆ ಎಂದು ನಂ.10ಮುದ್ದಾಪುರ ಗ್ರಾಪಂ ಪಿಡಿಒ ಬೀರಲಿಂಗ ಹೇಳಿದರು. 

ತಾಲೂಕಿನ ನಂ.10ಮುದ್ದಾಪುರ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ, ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಹಾಂತಮ್ಮ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಶೇ.30ರಷ್ಟು ಕರ ಪರಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಿದ್ದು, ಪ್ರಸಕ್ತ ಸಾಲಿನಿಂದಲೇ ಪರಿಷ್ಕೃತ ಧರದ ಕರ ವಸೂಲಿ ಮಾಡಲಾಗುವುದು. ಶೇ.100ರಷ್ಟು ಕರ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 

    ನರೇಗಾ ಯೋಜನಡಿಯಲ್ಲಿ 60ಸಾವಿರ ಮಾನವ ದಿನಗಳ ಸೃಜನೆಯ ಗುರಿ ಹೊಂದಿದ್ದು, ಈಗಾಗಲೇ 22ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ನಿತ್ಯ 850ಜನ ನರೇಗಾದಡಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. 2017-18ನೇ ಸಾಲಿನ ಬಸವ ವಸತಿ ಯೋಜನಡಿಯಲ್ಲಿ 20ಮನೆಗಳ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ದೊರಕಬೇಕಾಗಿದೆ. ಸ್ವಚ್ಛ ಭಾರತ್ ಮಿಷನ್ನಿನ ಸಮೀಕ್ಷೆಯಲ್ಲಿ ಬಿಟ್ಟು ಹೋದ(ಎಲ್ಒಬಿ) 141 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಡಬಲ್ ಪಿಟ್(ದ್ವಿ ಗುಂಡಿ)ಗಳನ್ನು ಹೊಂದಿರುವ ವೈಯಕ್ತಿಕ ಶೌಚಾಲಯಗಳಿಗೆ ಮಾತ್ರ ಅನುದಾನ ಒದಗಿಸಲಾಗುವುದು ಎಂದು ಹೇಳಿದರು. 

     ಸಭೆಯಲ್ಲಿ ಪ್ರಭುಕ್ಯಾಂಪಿನ ಸದಸ್ಯ ಬಿ.ಹೊನ್ನೂರಪ್ಪ ಮಾತನಾಡಿ, ಶೇ.3ರ ಯೋಜನಡಿಯಲ್ಲಿ ಅಂಗವಿಕಲರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವಂತೆ, ಕುಡಿವ ನೀರಿನ ಬೋರ್ಗೆ ಮೋಟರ್ ಅಳವಡಿಸುವಂತೆ, ಸಹಾಯಮಾತೆ ಆಶ್ರಮದ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕಕ್ಕೆ ವಿದ್ಯುತ್ ಮೀಟರ್ ಅಳವಡಿಸುವುದು, ಇದೇ ಪ್ರದೇಶದ ರಸ್ತೆಗಳ ಬದಿಯಲ್ಲಿನ ರೀಜರ್ ಬೇಲಿಗಳನ್ನು ಕಡಿದು ಸ್ವಚ್ಚಗೊಳಿಸಿ, ಬೀದಿದೀಪಗಳನ್ನು ಅಳವಡಿಸುವಂತೆ ಗ್ರಾಮಾಡಳಿತವನ್ನು ಒತ್ತಾಯಿಸಿದರು. ನಾನಾ ಸದಸ್ಯರು ತಮ್ಮ ವಾರ್ಡಗಳಲ್ಲಿನ  ಸಮಸ್ಯೆಗಳ ಕುರಿತು ಗ್ರಾಮಾಡಳಿತದ ಗಮನಕ್ಕೆ ತಂದು ಚಚರ್ಿಸಿದರು. 

   ಸಭೆಯಲ್ಲಿ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ, ಉಪಾಧ್ಯಕ್ಷ ವೈ.ಉಮೇಶ್, ಸದಸ್ಯರಾದ ಮಲ್ಲಯ್ಯ, ಬಳೆ ನಂದಿನಿ, ಎಚ್.ಚಂದ್ರಕಲಾ, ಡಿ.ಭೀಮಮ್ಮ, ಲಕ್ಷ್ಮಮ್ಮ, ಜೀರು ಮಲ್ಲಪ್ಪ, ಜಿ.ಮಲ್ಲಿಕಾರ್ಜುನ, ಆನೆಗುಂದಿ ತಾಯಣ್ಣ, ಬಂಡಾರಿ ನರಸಪ್ಪ, ಬಿ.ಹೊನ್ನೂರಪ್ಪ, ಜಿ.ಪದ್ಮಾವತಿ, ವೈ.ಲೋಕರಾಜ್, ನೇಣ್ಕಿ ಉಡುಸಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ಎಚ್.ಈರಣ್ಣ, ನಾಯ್ಕರ್ ನೀಲಮ್ಮ, ಗೀತಮ್ಮ ನಾಯ್ಕರ್ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು.