ಲೋಕದರ್ಶನ ವರದಿ
ಕಂಪ್ಲಿ 15: ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಜೋತೆಗೆ ದೇವತೆಗಳ ದೈವಾನುಗ್ರ ಬಗ್ಗೆ ತಿಳಿಸಲು ಮುಂದಾಗಬೇಕುಎಂದು ಇಲ್ಲಿನ ದೈವಾನುಗ್ರಹ ಜ್ಯೋತಿಷಿ ಪ್ರಕಾಶ ವೈದ್ಯರು ಹೇಳಿದರು.
ನಿಮಿಷಾಂಬಾ ದೇವಸ್ಥಾನದ ಆವರಣದಲ್ಲಿ, ಸೋಮವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜ ಹಮ್ಮಿಕೊಂಡಿದ್ದ ನಿಮಿಷಾಂಬಾ ದೇವಿಯ 33ನೇಜಯಂತ್ಯುತ್ಸವ ಸಮಾರಂಭದ ದಿವ್ಯಸಾನ್ನಿಧ್ಯವಹಿಸಿ ಮಾತನಾಡಿ, ಸರ್ವರು ಗುರುಹಿರಿಯರ ತತ್ವ ಆದರ್ಶಗಳನ್ನು ಪರಿಪಾಲಿಸಿದಾಗ ಉತ್ತಮ ಜೀವನ ನಡೆಸಲುಸಾಧ್ಯ ಎಂದು ಹೇಳಿದರು.
ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಮಾತನಾಡಿ, ಚಿತ್ರಗಾರ ಸಮುದಾಯದವರು ಮೂಲತಕಲೆ ಮತ್ತು ಕರಕೌಶಲ್ಯಗಳಿಗೆ ಹೆಚ್ಚಿನ ಅಧ್ಯತೆ. ಇದರ ಜೋತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯಲು ಸಾಧ್ಯ ಸರ್ಕಾರದ ಸೌಲಭ್ಯ, ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಅಧ್ಯಕ್ಷ ತುಳಸಿರಾಮ ಉಬಾಳೆ ಅಧ್ಯಕ್ಷತೆವಹಿಸಿ,ದರು ನಿಮಿಷಾಂಬಾ ದೇವಸ್ಥಾನ ಆವರಣದಲ್ಲಿ ಮಡಿತೇರು, ಗಣಪತಿ ಹೋಮ ಸೇರಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು.
ವೆಂಕಟೇಶ್ ಬೂಸಾರೆ ಸ್ಮರಣಾರ್ಥ ಪ್ರಶಾಂತ ಬೂಸಾರೆಯವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಚಿತ್ರಗಾರ ಮನೋಜ್ ಇವರಿಗೆ, ಉಬಾಳೆ ಅಂಬಾಜಿರಾವ್ ಸ್ಮರಣಾರ್ಥ ತುಳಸಿರಾಮ ಉಬಾಳೆ ಅವರು ದ್ವಿತಿಯ ಪಿಯೂಸಿಯಲ್ಲಿ ಹೆಚ್ಚು ಅಂಕಗಳಿಸಿದ ಗಾಯತ್ರಿ ಬೂಸಾರೆ ಇವರಿಗೆ ನಗದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಅಮ್ಮನವರ ರಥೋತ್ಸವ, ಪಲ್ಲಕ್ಕಿ ಉತ್ಸವಾದಿಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು. ದೇವದುರ್ಗದ ಸಾಹಿತಿ ಶಂಕರ್ ಉಬಾಳೆ, ಬಾರಾಮತಿಯ ಪರಶುರಾಮ ಬೂಸಾರೆ, ಷಣ್ಮುಖಪ್ಪ ಗಿರಿಯಪ್ಪ ಚಿತ್ರಗಾರ್ ವೇದಿಕೆಯಲ್ಲಿದ್ದರು
ಚಿತ್ರಗಾರ ಸಮಾಜದ ಪದಾಧಿಕಾರಿಗಳಾದ ಪರಶುರಾಮಪ್ಪ ಚಿತ್ರಗಾರ, ಎಸ್.ಜಿ.ಚಿತ್ರಗಾರ, ಶಿವಾನಂದ ಉಬಾಳೆ, ಸುಬ್ರಹ್ಮಣ್ಯ ಉಬಾಳೆ, ಮಾರುತಿ ಚಿತ್ರಗಾರ, ರಾಜಣ್ಣ ಬೂಸಾರೆ, ಗಜಾ ಚಿತ್ರಗಾರ, ನಾಗರಾಜ ಬೂಸಾರೆ, ಪರಶುರಾಮ ಇಂಡಿ, ಮಹೇಶ ಚಿತ್ರಗಾರ, ಬಾಬು ಚಿತ್ರಗಾರ ಸೇರಿ ಚಿತ್ರಗಾರ ಸಮಾಜದವರು, ಮಹಿಳಾ ಘಟಕದವರು, ಯುವಕರು ಪಾಲ್ಗೊಂಡಿದ್ದರು.