ಲೋಕದರ್ಶನ ವರದಿ
ಕಂಪ್ಲಿ 30: ಸ್ಥಳೀಯ ಎಸ್ಜಿವಿಎಸ್ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ, ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕಂಪ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 'ವಚನ ದಿನ' ನಿಮಿತ್ತ ಗದಗಿನ ಬಿ.ಎಂ.ಬಸವರಾಜ ಇವರ ದತ್ತಿ ಕಾರ್ಯಕ್ರಮ ಜರುಗಿತು.
ವಚನ ದಿನ ಸಮಾರಂಭಕ್ಕೆ ಗಣ್ಯವರ್ತಕ ಕೃಷ್ಣ ಎಸ್.ಪೋಳ್ ಅವರು ಚಾಲನೆ ನೀಡಿ, ವಚನಗಳನ್ನು ಶಿಕ್ಷಣದ ಜೊತೆಜೊತೆಗೆ ಕಲಿಸಿಕೊಡುವ ಅಗತ್ಯತೆ ಹೆಚ್ಚಿದೆ. ಮಕ್ಕಳಲ್ಲಿ ನೈತಿಕತೆ, ಸಂಸ್ಕಾರ ಮತ್ತು ಮಾನವೀಯ ಧರ್ಮಗಳನ್ನು ಕಲಿಸಿಕೊಡುವಲ್ಲಿ ಪೋಷಕರು ಜಾಗೃತಿ ತೋರಬೇಕು ಎಂದು ಹೇಳಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗಂಗಾಧರ ಜಡಿಮಠ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜ ಪರಿವರ್ತನೆಯಲ್ಲಿ ವಚನಗಳ ಪಾತ್ರ ಪ್ರಮುಖವಾಗಿದೆ ಎಂದರು.
ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಿ.ಎಸ್.ರಾಜಕುಮಾರ್ 'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ ಕುರಿತು ಮಾತನಾಡಿ, ವಚನ ಸಾಹಿತ್ಯ ಸರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ ಪ್ರಸ್ತುತ ದಿನಮಾನಗಳಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿದ್ದು ವಚನ ಸಾಹಿತ್ಯ ರಾಮಬಾಣವಾಗಿದೆ ಎಂದು ಹೇಳಿದರು.
ವಚನ ಕಂಠಪಾಠ ಸ್ಪರ್ದೇ ಯಲ್ಲಿ ಹೆಚ್ಚು ವಚನಗಳನ್ನು ಹೇಳಿದ 8ನೇ ತರಗತಿಯ ಸರಸ್ವತಿಗೆ ಮೊದಲ ಬಹುಮಾನವಾಗಿ 500ರೂ, 10ನೇತರಗತಿಯ ವಿ.ಇಂದುಮುಖಿ ದ್ವಿತೀಯ ಬಹುಮಾನವಾಗಿ 300ರೂ ಹಾಗೂ 9ನೇತರಗತಿಯ ಹರ್ಷಿತಾ ಇವರಿಗೆ ಮೂರನೇ ಬಹುಮಾನವಾಗಿ 200ರೂ.ಗಳ ನಗದು ಪುರಸ್ಕಾರ, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪ್ರಕಾಶ್ ಪ್ರಾಸ್ತವಿಕ ನುಡಿದರು. ಶಿಕ್ಷಕ ಸಿದ್ಧಲಿಂಗೇಶ್ವರ ಗದುಗಿನ ನಿರೂಪಿಸಿದರು. ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.