ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ


ನವದೆಹಲಿ: ಅಂತರಾಷ್ಟ್ರೀಯ ಹಾಕಿ ಫೆಡರೇಏಷನ್ ಮಂಗಳವಾರ ಬಿಡುಗಡೆ ಮಾಡಿದ ನೂತನ ವಿಶ್ವ ಯರ್ಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ಹಾಕಿ ತಂಡ  5ನೇ ಸ್ಥಾನಕ್ಕೆ ಏರಿದೆ. 

ಇತ್ತೀಚೆಗೆ ನೆದಾಲ್ರ್ಯಂಡ್ ನಲ್ಲಿ ನಡೆದಿದ್ದ  ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸತತ ಎರಡನೇ ಬಾರಿ ರನ್ನರ್ ಅಪ್ ಸ್ಥಾನ ಗಳಿಸಿಕೊಂಡಿತ್ತು. 

ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ ಆಸ್ಟ್ರೇಲಿಯಾ ಅಗ್ರ ಶ್ರೇಯಾಂಕಿತವಾಗಿ ಹೊರಹೊಮ್ಮಿದೆ.  

ಭಾರತವು 1484 ಅಂಕಗಳೊಡನೆ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಐದನೇ ಶ್ರೇಯಾಂಕ ಪಡೆದಿದೆ. ಜರ್ಮನಿಯನ್ನು ಹಿಂದಿಕ್ಕಿರುವ ಭಾರತ ಈ ಸಾಧನೆ ಮಾಡಿದೆ. (ಫೋಟೊ 3)