ಲೋಕದರ್ಶನ ವರದಿ
ಇಂಡಿ 28: ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡೋಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡಿ ರೈಲು ನಿಲ್ದಾನದ ನಿವಾಸಿ ಜಾಹೀದಾ ಹುಂಡೇಕರ್ ಅವರನ್ನು ಸಹಾಯಹಸ್ತ ಸೇವಾ ಸಮೀತಿ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರವನ್ನುದ್ದೇಶಿಸಿ ಸಮೀತಿಯ ಸದಸ್ಯ ನಾಗರಾಜ ದಶವಂತ ಪ್ರಭುಗೌಡ ಪಾಟೀಲ ಮಾತನಾಡಿ ನಮ್ಮ ತಾಲೂಕಿನ ಓರ್ವ ಸಹೋದರಿ ಇಂದು ರಾಷ್ಟ್ರಮಟ್ಟದ ಮಾಧ್ಯಮದಲ್ಲಿ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮ್ಮ ತಾಲೂಕಿನ ಹೆಮ್ಮ, ಈ ಸಹೋದರಿಯ ಸಾಧನೆಯನ್ನು ಶಾಲಾ ಮಕ್ಕಳಿಗೆ ತಿಳಿಸಿ ಮಕ್ಕಳನ್ನೂ ಸಹ ಪ್ರೇರೇಪಿಸುವ ಕಾರ್ಯ ಸಹಾಯಹಸ್ತ ಸೇವಾ ಸಮೀತಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ರಿಯಾಜ್ ಹುಂಡೇಕಾರ, ಮಲ್ಲು ಗುಡ್ಲ, ಅಯೂಬ ನಾಟೀಕರಾ, ಸುರೇಶ ಶಿವೂರ, ಬಸವರಾಜ ಕುಮಸಗಿ ಸೇರಿದಂತೆ ಮತ್ತಿತರರು ಇದ್ದರು.