ಇಂಡಿ 06: ತಾಲೂಕಿನ ಶೋಟೋಖಾನ ಕರಾಟೆ ತರಬೇತಿ ಸಂಸ್ಥೆಯ ಸಾಲೋಟಗಿ ಹಾಗೂ ಲಚ್ಯಾಣ ಗ್ರಾಮದ ವಿದ್ಯಾಥರ್ಿಗಳು ಇತ್ತಿಚೆಗೆ ಗೋವಾದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಪದಕ ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಪದಕ ಪಡೆದುಕೊಂಡ ವಿದ್ಯಾರ್ಥಿಗಳು ಸಾಗರ ರವಿ, ಶ್ರಾವಣೀ ಬಡದಾಳ, ಸದ್ದಾಮ್ ಚೌಧರಿ, ಸೃಜನ ಶಿವಶರಣ, ಪ್ರಶಾಂತ ಹೊನಗಂಡೆ, ಪ್ರಸನ್ನ ಇಂಗಳೆ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕರ್ನಾಟಕ ರಾಜ್ಯದ ಪ್ರತಿನಿಧಿ ಮತ್ತು ತರಬೇತಿದಾರರಾದ ಈಶ್ವರ ಸಾವಳಕರ ಅನೇಕರು ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ತಿಳಿಸಿದ್ದಾರೆ.