ನಾಗರಾ ಜಜುಮ್ಮನ್ನವರವರಿಗೆ ಒಲಿದ ರಾಜ್ಯ ಹಿರಿಯ ಉಪಾಧ್ಯಕ್ಷ ಪಟ್ಟ

Nagara Jajummanna was favored by the State Senior Vice President


ನಾಗರಾ ಜಜುಮ್ಮನ್ನವರವರಿಗೆ ಒಲಿದ ರಾಜ್ಯ ಹಿರಿಯ ಉಪಾಧ್ಯಕ್ಷ ಪಟ್ಟ 

ಕೊಪ್ಪಳ 09: ಸರಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಸತತ ಮೂರನೇ ಬಾರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಜುಮ್ಮನ್ನವರಿಗೆ ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರ ಹುದ್ದೆ ಲಭಿಸಿದೆ. 

ಬುಧವಾರ ಬೆಂಗಳೂರು ನಗರದ ಕಬ್ಬನ ಉದ್ಯಾನವನದ ಸರಕಾರಿ ನೌಕರರ ಭವನದಲ್ಲಿ ಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರಾದ ಸಿ.ಎಸ್‌.ಷಡಕ್ಷರಿ ಅವರು ನಾಗರಾಜಜುಮ್ಮನ್ನವರ ಹಿರಿತನವನ್ನು ಹಾಗೂ ಕಳೆದ 22 ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುವದನ್ನು ಮನಗಂಡುಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರ ಹುದ್ದೆಯನ್ನು ನೀಡುವ ಮೂಲಕ ಸಂಘಟನೆಗೆ ಶ್ರಮವಹಿಸಿದ ನಾಯಕರನ್ನು ಗುರುತಿಸಿದಂತೆ ಆಗಿದೆ. 

ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್‌.ಷಡಕ್ಷರಿ, ಗೌರವಾಧ್ಯಕ್ಷರಾದ ಎಸ್‌.ಬಸರಾಜ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಗಿರಿಗೌಡ್ರು, ಜಿಲ್ಲಾ ಕಾರ್ಯದರ್ಶಿಯಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರ​‍್ಪಅಂಡಗಿ, ನೌಕರರ ಸಂಘದ ನಿರ್ದೇಶಕರಾದ ಬಾಳಪ್ಪ ಕಾಳೆ, ಸಂಜೀವ, ಸುರೇಶ ಮೋರಗೇರಿ, ಕಾಶಪ್ಪ ಹಳ್ಳಿ, ಸುನೀಲ್,ವೆಂಕಟೇಶಕುಲಕರ್ಣಿ,ನಾಗರಾಜ ಕುಷ್ಟಗಿ,ಶ್ರೀನಿವಾಸ ಜನಾದ್ರಿಮುಂತಾದವರು ಹಾಜರಿದ್ದರು.