ಇಂಡಿ : ಭಾರತ ಸಾಂಸ್ಕೃತಿಕ ಪರ್ವ ರಕ್ಷಾ ಬಂಧನ: ಯಮುನಾ

ಲೋಕದರ್ಶನ ವರದಿ

ಇಂಡಿ 13: ರಕ್ಷಾ ಬಂಧನವು ಎಲ್ಲ ಪರ್ವಗಳಲ್ಲಿ ವಿಶೇಷವಾದ ಹಬ್ಬ ಅದು ಭಾರತ ದೇಶದ ಸಾಂಸ್ಕೃತಿಕ ಪರ್ವ ಹಾಗೂ ಮಾನವೀಯ ಮೌಲ್ಯಗಳನ್ನು ತೋರಿಸಿಕೊಡುವ ಹಬ್ಬ ರಕ್ಷಾ ಬಂಧನವಾಗಿದೆ ಎಂದು ಇಂಡಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ. ಯಮುನಾ ಅಕ್ಕನವರು ಹೇಳಿದರು.

  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಪರ್ವ  ಕಾರ್ಯಕ್ರಮದ ಚಾಲನೆಯನ್ನು ನೀಡಿ ಮಾತನಾಡಿದರು.

 ಜಗತ್ತಿನಲ್ಲಿ ಭಾರತ ದೇಶವು ಹಬ್ಬಗಳ ನಾಡದಂದೆ ಕರೆಯುತ್ತಾರೆ. ಆದರೆ ಭಾರತ ದೇಶದ ಸಂಸ್ಕೃತಿಯನ್ನು ಎಲ್ಲ ದೇಶದವರು ಪ್ರಶಂಸುತ್ತಿದ್ದಾರೆ. ಅಲ್ಲದೇ  ಈ ಹಬ್ಬವು ಮಾನವೀಯ ಮೌಲ್ಯವನ್ನು ತಿಳಿಸುತ್ತದೆ. ಹಾಗೂ ಅನೇಕ ಅಧ್ಯಾತ್ಮಿಕ ರಹಸ್ಯಗಳ ಮೇಲೆ ಬೆಳಕನ್ನು ಮಾಡುವು ಹಬ್ಬವಾಗಿದೆ. ಅಲ್ಲದೇ ಸಹೋಧರ ಹಾಗೂ ಸಹೋಧರಿ ಉತ್ತಮ ಬಾಂಧವ್ಯಕ್ಕೆ ದೇವರು ಕೊಡುಗೆ ನೀಡುತ್ತಾರೆ ಹಾಗೂ  ರಾಖಿಯನ್ನು ಕಟ್ಟುವ ಮೊದಲು ಸಹೋಧರಿಯು ಸಹೋಧರರಿಗೆ ರಾಖಿಯನ್ನು ಕಟ್ಟುವ ಮೊದಲು ಹಣೆಗೆ ತಿಲಕವನ್ನು ಇಡುತ್ತಾರೆ ಅದರಿಂದ ಜೀವನದಲ್ಲಿ ಸುವಾಸನೆ ಮತ್ತು ಶುದ್ಧವಾಗಲು ಪ್ರೇರಣೆ ನೀಡುತ್ತದೆ. ಮತ್ತು ರಾಖಿಯನ್ನು ಕಟ್ಟಲು ಬಲಗೈಗೆ ಕಟ್ಟುತ್ತೇವೆ. ಇದನ್ನು ಸಕಾರಾತ್ಮಕ ಚಿಂತನೆ ಮಾಡುತ್ತದೆ. ಅಲ್ಲದೇ ಇದರಿಂದ ದು:ಖ ಹಾಗೂ ಅಶಾಂತದಿಂದ ಮುಕ್ತರಾಗುತ್ತೇವೆ. ಈ ಪವಿತ್ರವಾದ ರಕ್ಷಾ ಬಂಧನವು ನಾವೇಲ್ಲರು ಕಟ್ಟಿಕೊಂಡು ದೇಶ ಹಾಗೂ ಆತ್ಮದ ರಕ್ಷೆಯನ್ನು ಮಾಡೋಣ ಎಂದು ತಿಳಿಸಿದರು.

ಯೋಗ ಶಿಕ್ಷಕ ಎಸ್.ಆರ್. ಪಾಟೀಲ  ಮಾತನಾಡಿ ರಕ್ಷಾ ಬಂಧನವು ರಕ್ಷಣೆಗಾಗಿ ಬಂಧನವಾಗಿದೆ. ಆದರೆ ನಾವೇಲ್ಲರೂ ಉತ್ತಮ ಮಾರ್ಗ ಹಾಗೂ ಒಳ್ಳೆಯ ಆರೋಗ್ಯವನ್ನು ಉಳಿಸಿಕೊಳ್ಖಬೇಕಾದರೆ ನಾವು ದಿನ-ನಿತ್ಯ ಯೋಗ ಹಾಗೂ ಅಧ್ಯಾತ್ಮವನ್ನು ಮಾಡಿದರೆ ಮಾತ್ರ ನಮ್ಮ ಜೀವನ ಪಾವನವಾಗಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಿ.ಕೆ. ಶ್ರೀದೇವಿ ಅಕ್ಕನವರು, ಸಹೋಧರಿ ಕೋಳೆಕರ, ಹಿರಿಯರಾದ ಎಸ್.ಎಂ.ಕಡಕೋಳ, ವಿಶ್ರಾಂತ ಪ್ರಾಚಾರ್ಯ ಎ.ಎಸ್. ಗಾಣಿಗೇರ, ಎಸ್.ಎಂ. ಕಠಾರೆ, ಉಪ್ಪಿನ ಸರ್, ಧನ್ಯಕುಮಾರ ಧನಶೆಟ್ಟಿ, ಯೋಗ ಗುರು ಎಸ್.ಆರ್. ಪಾಟೀಲ, ಎನ್.ವಿ.ಹಂಜಗಿ ಸೇರಿದಂತೆ ಎಲ್ಲ ಸಹೋಧರಿ ಹಾಗೂ ಸಹೋಧರರು ಪಾಲ್ಗೋಂಡಿದ್ದರು.