ಲೋಕದರ್ಶನ ವರದಿ
ಇಂಡಿ 29: ಗ್ರಾಮಿಣ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಹುಟ್ಟು ಹಾಕಿ ಸರಕಾರದಿಂದ ದೊರೆಯುವ ಪ್ರತಿಯೊಂದು ಸಹಾಯ ಸೌಲಭ್ಯಗಳನ್ನು ಪಡೆದುಕೊಂಡು ಆಥರ್ಿಕವಾಗಿ ಸಬಲರಾಗಿ ಸಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀಸಿದ್ದಲಿಂಗೆಶ್ವರ ಗೆಳೆಯರ ಬಳಗ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗರಡಿ ಮನೆ, ಕಕ್ಕಯ್ಯಾ ಭವನ, ವಾಲ್ಮೀಕಿ ಭವನ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಉದ್ಘಾನೆ ನೆರವೇರಿಸಿ ಮಾತನಾಡಿದರು.
ವಿಶ್ವದಲ್ಲಿಯೇ ಸ್ತ್ರೀಯರನ್ನು ಮಾತೃಸ್ಥಾನದಲ್ಲಿ ಗೌರವಿಸುವ ದೇಶ ಯಾವುದಾದರು ಇದ್ದರೆ ಅದು ಭಾರತ ದೇಶದಲ್ಲಿ ಮಾತ್ರ ಕಾಣುತ್ತೆವೆ. ಒಂದು ಕುಟುಂಬದ ಸರ್ವಾ ಗೀಣ ಅಭಿವೃದ್ದಿಗೆ ಮಹಿಳೆ ಸಹಕಾರಿಯಾಗಿ ಸ್ತ್ರೀ ದೇವತೆ ಸಮಾನವಾಗಿದ್ದಾಳೆ. ಮಹಿಳೆಯರು ಇನ್ನಷ್ಟು ಅಭಿವೃದ್ದಿ ಹೊಂದಬೇಕು ಒಂದು ಕುಟುಂಬದ ಆಧಾರ ಸ್ಥಂಬ ಮಹಿಳೆಯಾಗಿದ್ದು ಸ್ವಸಹಾಯ ಸಂಘಗಳಿಂದ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದಾಗ ಆ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳು ಸಾಧ್ಯವಾಗುತ್ತದೆ ಎಂದರು.
ಧರ್ಮಾರಾಠೋಡ, ಕರ್ನಾಟಕ ಕ್ರೀಡ ರತ್ನ ಕಾತರ್ಿಕ ಕಾಟೆ, ಗ್ರಾ.ಪಂ ಅಧ್ಯಕ್ಷ ಗಂಗಾಬಾಯಿ ಹತ್ತಳ್ಳಿ, ತಾ.ಪಂ ಸದಸ್ಯ ಗಂಗಾಧರ ಪಾಟೀಲ, ಸಾಂಬಾಜಿರಾವ ಮಿಸಾಳೆ, ಅರವಿಂದ ಬಿರಾದಾರ, ಸದಾಶಿವ ಪ್ಯಾಟಿ, ಭಗಣ್ಣಾ ಹರಳಯ್ಯಾ, ತಾ.ಪಂ ಅಧಿಕಾರಿ ಡಾ.ವಿಜಯಕುಮಾರ ಅಜೂರ, ರಾಜಕುಮಾರ ತೋರವಿ, ವಿಠ್ಠಲ ಹಳ್ಳಿಕರ, ಅರ್ಜುನ ನಾಯ್ಕೋಡಿ, ಶೈಲಜಾ ಸ್ಥಾವರಮಠ, ಜಗದೇವಿ ನಾಗಣಸೂರ, ಮುತ್ತಪ್ಪ ಪೋತೆ, ಉಮೇಶ ಲಮಾಣಿ, ಭೀಮಾಶಂಕರ ಕಾಗವಾಡಕರ್.ಧನರಾಜ ಮುಜಗೊಂಡ, ಎಸ್.ಎಂ.ಶೆಟ್ಟೇಣವರ್, ಗಿರೀಶಗೌಡ ಪಾಟೀಲ, ಶಿವಾನಂದ ಮುಜಗೊಂಡ, ಸಿದ್ದು ಗೋಡಿಹಾಳ ಸೇರಿದಂತೆ ಗ್ರಾಮದ ಮುಖಂಡರು ಗಣ್ಯರು ಇದ್ದರು.