ನಾಳೆ ನೂತನ ಸಭಾಭವನದ ಶಂಕುಸ್ಥಾಪನೆ

ರಾಣೇಬೆನ್ನೂರ17: ಸುಕ್ಷೇತ್ರವೆಂದೇ ಹೆಸರಾದ ತಾಲೂಕಿನ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ, ಧರ್ಮಸಭೆ, ಸರ್ವಧರ್ಮ ಸಾಮೂಹಿಕ ವಿವಾಹಗಳು ಮಾ.19ರಂದು ನಡೆಯಲಿವೆ.

    ಸೂಯರ್ೋದಯ ಕಾಲಕ್ಕೆ ಶಿವದೀಕ್ಷಾ, ಗುಗ್ಗಳ ಸಮಾರಾಧನೆ, ರಥೋತ್ಸವ ಮತ್ತು ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಂದ ನೂತನ ಸಭಾಭವನದ ಶಂಕುಸ್ಥಾಪನೆ.  ನಂತರ ಮಹಾರುದ್ರಯಾಗದ ಪೂಣರ್ಾಹುತಿ ಹಾಗೂ 10-30ಕ್ಕೆ ಮಹಾ ಧರ್ಮಸಭೆ ಜರುಗಲಿದೆ.

    ಬೆಂಗಳೂರಿನ ಮಲ್ಲಿಕಾಜರ್ುನ ದೇವರು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು. ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶ್ರೀಗಳು, ಹೊನ್ನಾಳಿಯ ಚನ್ನಮಲ್ಲಿಕಾಜರ್ುನ ಶಿವಾಚಾರ್ಯರು, ಕಂಕಳ್ಳಿಯ ಸೋಮಶೇಖರಯ್ಯ ಶ್ರೀಗಳು, ನರಸಾಪುರದ ಶಿವಕುಮಾರ ಶಿವಶರಣರು ಸೇರಿದಂತೆ ನಾಡಿನ ಹರಗುರು ಚರಮೂತರ್ಿಗಳು ಆಗಮಿಸುವರು. 

    ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಗುರುಕುಲ ಮತ್ತು ಎಕ್ಸ್ಲೆಂಟ್ ಪಬ್ಲಿಕ್ ಶಾಲೆಗೆ 5ನೇ ತರಗತಿಯಿಂದ ಉಚಿತ ವಸತಿ ಹಾಗೂ ಶಾಲೆಯ ಪ್ರಾರಂಭೋತ್ಸವ ನಡೆಯಲಿದೆ. ಆನಂತರ ಸರ್ವ ಧರ್ಮ ಸಾಮೂಹಿಕ ವಿವಾಹಗಳು ಜರುಗಲಿವೆ ಎಂದು ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.