ಶಾಲಾ ಮುಖ್ಯೋಪಾಧ್ಯಾಯನಿ ಜಿ.ಸುಮಾಗೆ ಸನ್ಮಾನ

ಲೋಕದರ್ಶನವರದಿ

ರಾಣಿಬೆನ್ನೂರು 19: ನಗರದ ಎಪಿಎಂಸಿ ರಸ್ತೆ ನಾಗಶಾಂತಿ ಉನ್ನತಿ ಕಾಲೇಜು ಭವನದಲ್ಲಿ ಶುಕ್ರವಾರ ನಡೆದ ಅಕ್ಕಮಹಾದೇವಿ ಜಯಂತ್ಯೋತ್ಸವ ಸಮಾರಂಭದಲ್ಲಿ ಅಕ್ಕ-ಸ್ತ್ರೀ ಸಮಾಜದ ಪ್ರೇರಕ ಶಕ್ತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಗಂಗಾಪುರ ಸಕರ್ಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಸುಮಾ ಜಿ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಹಾಗೂ ಬಸವ ಜ್ಯೋತಿ ಮಹಿಳಾ ಮಂಡಳದ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. 

ಶ.ಸಾ.ಪ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಮಹಿಳಾ ಮಂಡಳದ ಅಧ್ಯಕ್ಷೆ ಸುವಣರ್ಾದೇವಿ ಪಾಟೀಲ, ತಾಲೂಕಾಧ್ಯಕ್ಷೆ ರಾಜೇಶ್ವರಿ ಪಾಟೀಲ, ಗೌರವಾಧ್ಯಕ್ಷ ವಾಸಣ್ಣ ಕುಸಗೂರು, ಪ್ರೊ: ಜಿ.ವಿಕೋರಿ, ಡಾ: ಕೆ.ಎಚ್.ಮುಕ್ಕಣ್ಣನವರ, ಸಿ.ಎನ್.ಜಗದೇವನವರ, ಎಂ.ಎಸ್.ಪಾಟೀಲ, ಜಯಶ್ರೀ ನಿರಲಗಿಮಠ ಸೇರಿದಂತೆ ಮತ್ತಿತರರ ಗಣ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.