ಪ್ರತಿಯೊಬ್ಬರು ತಮ್ಮ ಧಮರ್ಾನುಸಾರ ಆಚರಣೆಗೆ ಮುಂದಾಗಿ: ಕಾಗಿನೆಲೆ ಶ್ರೀಗಳ

ಲೋಕದರ್ಶನವರದಿ

ರಾಣೇಬೆನ್ನೂರ೦೫: ಯಾವುದೇ ಸಮಾಜವು ಅವರವರ ಧಮರ್ಾನುಸಾರವಾಗಿ ನಿತ್ಯವು ಭಗವಂತನ ಪ್ರಾರ್ಥನೆಯೊಂದಿಗೆ ಧರ್ಮದ ಆಚರಣೆಯಲ್ಲಿ ಸಾಗಿದಾಗ ಮಾತ್ರ ಮಾನಸಿಕ ಶಾಂತಿ ಮತ್ತು ನೆಮ್ಮದಿಯೊಂದಿಗೆ ಕುಟುಂಬದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು. 

ಅವರು ರವಿವಾರ ಇಲ್ಲಿನ ಹಲಗೇರಿ ರಸ್ತೆಯ ಹೊರಬೀರೇಶ್ವರ ದೇವಸ್ಥಾನ ಸಭಾಂಗಣದಿಂದ ಮೈಲಾರ ಕ್ಷೇತ್ರಕ್ಕೆ ಏಳುಕೋಟಿ ಭಕ್ತರ ಕುಟಿರ ಮತ್ತು ಕನಕ ಗುರುಪೀಠ ಶಾಖಾಮಠ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಗರದ ಭಕ್ತರು ಆಯೋಜಿಸಿದ್ದ ಧರ್ಮಜಾಗೃತಿಯ ಬೃಹತ್ ಬೈಕ್ರ್ಯಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಹಾಲುಮತ ಜನಾಂಗವು ವೇದ ಇತಿಹಾಸ ಕಾಲಗಳಿಂದಲೂ ತನ್ನದೆಯಾದ ಸಂಸ್ಕೃತಿ ಮತ್ತು ಸಂಸ್ಕಾರ ಪರಂಪರೆಯ ಮೂಲಕ ಎಲ್ಲ ಸಮುದಾಯಗಳ ಮಧ್ಯ ಬದುಕಿ ತಮ್ಮ ವೃತ್ತಿ ಜೀವನದ ಮೂಲಕ ಭಾವೈಕ್ಯತೆ ಸಾರಿದ ಸಮಾಜವಾಗಿದೆ. ಯಾರಿಗೂ ಯಾವುದೇ ರೀತಿಯ ಕೇಡನ್ನು ಬಯಸದೆ ತಮ್ಮ ಆರಾಧ್ಯ ದೇವರ ಮೂಲಕ ಎಲ್ಲರ ಒಳಿತನ್ನೇ ಬಯಸುವ ಮತ್ತು ಹಾಲಿನಷ್ಟೆ ಶುಭ್ರ ಮತ್ತು ಪವಿತ್ರತೆ ಹೊಂದಿರುವ ಸಮಾಜ. 

 ಪ್ರತಿಯೊಬ್ಬರು ತಮ್ಮ ಧರ್ಮದ ಆಚರಣೆಯಲ್ಲಿ ತೊಡಗಿಕೊಂಡು ಕಾಯಕ ಜೀವಿಗಳಾಗಿ ಬದುಕು ಸಾಗಿಸಲು, ಸಮಾಜ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು. 

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಶಂಕರ್ ಅವರು ಸರ್ವ ಭಕ್ತಾಧಿಗಳ ಪರವಾಗಿ ಶ್ರೀಗಳಿಗೆ ನಗರಕ್ಕೆ ಬರಮಾಡಿಕೊಂಡು ಸನ್ಮಾನಿಸಿ ಆಶೀವರ್ಾದ ಪಡೆದರು. ಹೊರ ಬೀರೇಶ್ವರ ದೇವಸ್ಥಾನ ಆವರಣದಿಂದ ಹೊರಟ ಸಾವಿರಾರು ದ್ವಿಚಕ್ರ ವಾಹನ ಸವಾರರ ಆಕರ್ಷಕ ಬೈಕ್ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಮೈಲಾರ ಕ್ಷೇತ್ರಕ್ಕೆ ಭಕ್ತರು ಅತ್ಯಂತ ಭಾವಪೂರ್ಣರಾಗಿ ಬೀಳ್ಕೊಟ್ಟರು. 

ರ್ಯಾಲಿ ಮುಂಚೂಣಿಯಲ್ಲಿ ಸಮಾಜದ ಮುಖಂಡರಾದ ಮರಡೆಪ್ಪ ಪೂಜಾರ, ಶಿದ್ದಣ್ಣ ಅಂಬಲಿ, ಮೃತ್ಯುಂಜಯ ಗುದಗೇರ, ಗುಡ್ಡಪ್ಪ ತಹಶೀಲ್ದಾರ, ಸಿದ್ದಪ್ಪ ಪೂಜಾರ, ರಮೇಶ ಕರಡೆಣ್ಣನವರ, ಹುಚ್ಚಪ್ಪ ಮೇಡ್ಲೇರಿ, ಸಿದ್ದಪ್ಪ ಬಾಗಿಲವರ, ನಿಂಗರಾಜ ಕೋಡಿಹಳ್ಳಿ, ಆನಂದ ಹುಲಬನ್ನಿ, ದಿಳ್ಳೆಪ್ಪ ಸತ್ಯಪ್ಪನವರ, ಹನುಮಂತಪ್ಪ ದೇವರಗುಡ್ಡ, ಭರಮಪ್ಪ ಪೂಜಾರ, ಕರಿಯಪ್ಪ ಕೋಲಕಾರ,  ಕುಬೇರಪ್ಪ ಕೊಂಡಜ್ಜಿ, ಮಾಲತೇಶ ಕಂಬಳಿ, ಚಂದ್ರಪ್ಪ ಕಂಬಳಿ, ಷಣ್ಮುಕಪ್ಪ ಕಂಬಳಿ, ಹೆಚ್.ಎಂ.ದೊಡ್ಡಬಿಲ್ಲ, ನೀಲಪ್ಪ ಕಲ್ಲಳ್ಳಿ, ನಾಗರಾಜ ಪೊಲೀಸ್ಗೌಡ್ರ, ಮಾಳಪ್ಪ ಪೂಜಾರ, ಕುಮಾರ ಹುಲ್ಲತ್ತಿ, ಚಂದ್ರು ಪೂಜಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಯುವಕರು ಪಾಲ್ಗೊಂಡಿದ್ದರು.