ಪೌರಕಾಮರ್ಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ

ಹಾವೇರಿ06: ಮತದಾನ ಅತ್ಯಂತ ಪವಿತ್ರ ಹಕ್ಕು, ಪ್ರಜಾಪಭುತ್ವದ ಬಲವರ್ದನೆಗಾಗಿ ಎಲ್ಲಾರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಹಾಗೂ ಮತದಾನದಲ್ಲಿ ಭಾಗವಹಿಸುವದು ಪ್ರಜೆಗಳ ಕರ್ತವ್ಯವಾಗಿದೆೆ ಎಂದು ಜಿಲ್ಲಾ  ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತ ಹಾವೇರಿ ಇವರ ಸಮಯುಕ್ತ ಆಶ್ರಯದಲ್ಲಿ ಹಾವೆರಿ ನಗರ ಸಭೆ ಆವರಣದಲ್ಲಿ ನಗರ ಸಭೆಯ ಪೌರ ಕಾಮರ್ಿಕರು, ಸಿಬ್ಬಂಂದಿ ವರ್ಗದವರು ಹಾಗೂ ಸಾರ್ವಜನಿಕರಿಗೆ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಯಾದ ಶ್ರೀಮತಿ ಅನ್ನಪೂರ್ಣ ಮುದುಕಮ್ಮನವರ ಮಾತನಾಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಕೆ ಲೀಲಾವತಿ ಮಾತನಾಡಿ ಪೌರಕಾಮರ್ಿಕರಿಗೆ ಮತ್ತು ನಗರಸಭೆ ಸಿಬ್ಬಂದಿ ವರ್ಗದರಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ತಾವೇ ಸ್ವತಃ ವಿವಿಪ್ಯಾಟ್ ಮೂಲಕ ಮತದಾನ ಮಾಡಿ ಪ್ರತಿಯೊಬ್ಬ ಪ್ರಜೆಯು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಹೇಳಿದರು. 

ನಗರ ಸಭೆಯ ವಾಹನಗಳ ಮೂಲಕ ಸ್ಟಿಕ್ಕರ್ಸ ಹಾಗೂ ಕರಪತ್ರಗಳನ್ನು ಅಂಟಿಸಿ ಹಾಡಿನ ಮೂಲಕ ಜಾಗೃತಿ ಮೂಡಿಸಲು ತಿಳಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಎಂ ಹೆಚ್ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿ ಶಿವಣ್ಣ ಹಾಗೂ ಅಕ್ಷರದಾಸೋಹದ ಸಹಾಯಕ ನಿದರ್ೇಶಕರಾದ ಪುಷ್ಪಾ ಬಿದರಿ ಹಾಗೂ ಸೆಕ್ಟರ್ ಅಧಿಕಾರಿಗಳಾದ ಐ ಹೆಚ್ ಇಚ್ಚಂಗಿ ಸಿ ಎಸ್ ಭಗವಂತಗೌಡ್ರ ತಾಲ್ಲೂಕು ಸಾಕ್ಷರ ಸಂಯೋಜಕರಾದ ಎನ್ ಹೆಚ್ ಕರೇಗೌಡ್ರ ಹಾಗೂ ತಾಲೂಕು ಪಂಚಾಯತ ಎನ್ ಆರ್ ಎಲ್ ಎಂ ಡಿ ಇ ಓ ಹಿತೈಸಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.