ಲೋಕದರ್ಶನವರದಿ
ಧಾರವಾಡ13 : ಶಿಕ್ಷಕ ವೃತ್ತಿ ಜನಮಾನಸದಲ್ಲಿ ಗೌರವ ಸ್ಥಾನ ಹೊಂದಿದ್ದು, ಶಿಕ್ಷಕರಾದವರು ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಬೇಕು ಹಾಗೂ ವೃತ್ತಿಯನ್ನು ಉತ್ತಮಪಡಿಸಿಕೊಳ್ಳಬೇಕೆಂಬ ರಚನಾತ್ಮಕ ಹಂಬಲ ಇಂದು ಅಗತ್ಯವಾಗಿದೆ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಎಸ್.ಜಿ. ನಾಡಗೀರ ಸ್ಮರಣಾರ್ಥ ಆಯೋಜಿಸಿದ ದತ್ತಿ ಕಾರ್ಯಕ್ರಮದಲ್ಲಿ 'ಶಿಕ್ಷಣದಲ್ಲಿ ನೈತಿಕತೆ' ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಪ್ರಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಇಂದಿನ ವಿಜ್ಞಾನ, ತಂತ್ರಜ್ಞಾನದ ತೀವ್ರತರ ಬದಲಾವಣೆಯ ಕಾಲದಲ್ಲಿ ಶಿಕ್ಷಣದಲ್ಲಿ ನೈತಿಕತೆಯ ವಿಚಾರ ಹೆಚ್ಚು ಪ್ರಸ್ತುತವಾಗಿದೆ. ಶಿಕ್ಷಕ ವೃತ್ತಿ ಉದಾತ್ತ ಮಾನವೀಯ ಮೌಲ್ಯಗಳಿಂದ ಕೂಡಿದ್ದು, ವಿದ್ಯಾಥರ್ಿಗಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುವ ನೈತಿಕತೆ ಅಗತ್ಯವಾಗಿದೆ. ಶಿಕ್ಷಕರಾದವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜ ಅಪೇಕ್ಷಿಸುವ ರೀತಿಯಲ್ಲಿ ನೈತಿಕ ನೆಲೆಗಟ್ಟಿನ ಮೇಲೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.
ಈ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ. ಇಂದು ಸಮಾಜ ಶಿಕ್ಷಕರ ಮಾರ್ಗದರ್ಶನ ಸೇವೆಯನ್ನು ನಿರೀಕ್ಷಿಸುತ್ತಿದ್ದು, ಸಮಾಜದ ನಿರೀಕ್ಷೆಯಂತೆ ಶಾಲೆಯ ಒಳಗೂ ಹಾಗೂ ಹೊರಗು ನೈತಿಕ ಪ್ರಜ್ಞೆಯಿಂದ ವ್ಯವಹರಿಸಬೇಕು. ಶಿಕ್ಷಕರಾದವರು ಉತ್ತಮ ಸಮಾಜದ ನಿಮರ್ಾತೃಗಳಾಗಿದ್ದು, ಅಪೇಕ್ಷಿತ ಮೌಲ್ಯದಂತೆ ವಿದ್ಯಾದಾನದ ವೃತದಾರಕರಾಗಿರಬೇಕು.
ಶಿಕ್ಷಕರಾದವರಿಗೆ ಪಠ್ಯ ಪುಸ್ತಕವೇ ಸರ್ವಸ್ವವಾಗಿರಬಾರದು. ಪಾಠ ಬೋಧಿಸುವಾಗ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಾಗೂ ಪ್ರಾಸಂಗಿಕವಾಗಿಯೂ ಪಠ್ಯಪುಸ್ತಕ ಮೀರಿ ನೈತಿಕ ವಿಚಾರಗಳನ್ನು ಸಂದಭರ್ೊಚಿತವಾಗಿ ವಿದ್ಯಾಥರ್ಿಗಳಲ್ಲಿ ಮೂಡಿಸಬೆಕು. ಸತ್ಯ, ಶಾಂತಿ, ಅಹಿಂಸೆ, ಆತ್ಮಸಂಯಮದಂತಹ ಜೀವನ ಮೌಲ್ಯಗಳನ್ನು ವಿದ್ಯಾಥರ್ಿಗಳನ್ನು ಬಿತ್ತಬೇಕು. ದಿ. ಎಸ್. ಜಿ. ನಾಡಗೀರ ಗುರುಗಳು ವಿದ್ಯಾಥರ್ಿಗಳ ಸುಖದಲ್ಲಿ ತಮ್ಮ ಸುಖವೂ ಇದೆ ಎಂದು ಬಾಳಿದವರುಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕರಾದ ಹರ್ಷ ಡಂಬಳ ಮಾತನಾಡಿ, ನೈತಿಕ ಶಿಕ್ಷಣ ಪಠ್ಯಕ್ರಮದ ಒಂದು ಅವಿಭಾಜ್ಯ ಅಂಗವಾಗಬೇಕು. ಅಂದಾಗ ಮಾತ್ರ ವಿದ್ಯಾಥರ್ಿಗಳಲ್ಲಿ ಸಾಮರಸ್ಯ, ಕೂಡಿ ಬಾಳುವ ಗುಣ ಹಾಗೂ ವೈಚಾರಿಕ ಪ್ರಜ್ಞೆ ಬೆಳೆಸಲು ಸಾಧ್ಯವಾಗುವುದು. ನಾವು ಇಂದು ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕಿತ್ತೊ ಅದಕ್ಕೆ ಕನಿಷ್ಠ ಸ್ಥಾನ ನೀಡಿದ್ದರಿಂದ ಅದರ ಕಹಿ ಫಲವನ್ನು ಅನುಭವಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಸರ್ವಕಾಲಿಕ ಜೀವನ ಮೌಲ್ಯಗಳನ್ನು ಎಳೆಯರ ಹೃದಯದಲ್ಲಿ ಬಿತ್ತಬೇಕು. ಅಂದಾಗ ಶಿಕ್ಷಣದಲ್ಲಿ ಒಳ್ಳೆಯ ಫಲ ಸಿಗಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯ ಮೇಲಿನ ಗಣ್ಯರು ದಿ. ಎಸ್. ಜಿ. ನಾಡಗೀರ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದತ್ತಿದಾನಿ ಅರಣ ಎಸ್. ನಾಡಗೀರ ವೇದಿಕೆ ಮೆಲೆ ಉಪಸ್ಥಿತರಿದ್ದರು. ಕಸ್ತೂರಿ ಬಡಿಗೇರ ಪ್ರಾಥರ್ಿಸಿದರು. ಕನರ್ಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು.
ಸಂಘದ ಕೋಶಾಧ್ಯಕ್ಷರು ಹಾಗೂ ಮಾರ್ಚ ತಿಂಗಳ ದತ್ತಿ ಕಾರ್ಯಕ್ರಮ ಸಂಯೋಜಕರಾದ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೀರಣ್ಣ ಒಡ್ಡೀನ ವಂದಿಸಿದರು.