ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ವಿಭಿನ್ನವಾದ ಚಿಂತನೆ: ಸಲೀಂ ಪಠಾಣ

ಕಲಕೇರಿ17:  ಜಯಕನರ್ಾಟಕ ಸಂಘಟನೆ ಕಲಕೇರಿ ವಲಯ ಘಟಕದ ವತಿಯಿಂದ ಕಲಕೇರಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ  ಶುಕ್ರವಾರದಂದು ಮಕ್ಕಳಿಗೆ ಮದ್ಹ್ಯಾನದ ಬಿಸಿ ಊಟದ ಜೋತೆ ಹಾಲು-ಹುಗ್ಗಿಯನ್ನು ವಿತರಿಸಲಾಯಿತು.

       ಸರಕಾರವು ದಿನ ನಿತ್ಯ ಮಕ್ಕಳಿಗೆ ಬರೀ ಅನ್ನ ಸಾರು ಹಾಕುವುದರಿಂದ ಮಕ್ಕಳಲ್ಲಿ ಉಟದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ನಾವು ಮನೆಯಲ್ಲಿ ಹೆಗೆ ವಿಭಿನ್ನವಾದ ಅಡುಗೆ ಮಾಡುತ್ತೇವೆಯೋ ಹಾಗೆ ಶಾಲೆಯಲ್ಲಿ ಮಾಡಬೇಕು. ಆದ್ದರಿಂದ ಇನ್ನು ಮುಂದಾದರು ಎಚ್ಚೆತ್ತುಗೊಂಡು  ವಾರಕ್ಕೆ ಒಂದೆರಡು ಭಾರಿಯಾದರೂ ಊಟದಲ್ಲಿ ವಿಭಿನವಾಗಿ ಅಡುಗೆ ಮಾಡಿದರೆ ಮಕ್ಕಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗೆ ಬರುವುದರಲ್ಲಿ ಸಂಶಯವಿಲ್ಲ ಎಂದು ಜಯಕನರ್ಾಟಕ ಸಂಘಟನೇಯ ಅಲ್ಪಸಂಖ್ಯಾತರ ಕಲಕೇರಿ ವಲಯದ ಅಧ್ಯಕ್ಷರಾದ ಸಲೀಂ ಪಠಾಣ ಇವರು ಮಕ್ಕಳಿಗೆ ಬಿಸಿ ಊಟದ ಜೊತೆ ಹಾಲು-ಹುಗ್ಗಿಯನ್ನು ವಿತರಿಸಿ ಮಾತನಾಡಿದರು. 

           ಸರಕಾರದ ಜೊತೆ ಗ್ರಾಮಸ್ಥರು ಹಾಗೂ ಯಾವುದಾದರು ಸಂಘಟನೆಯವರು ಅಥವಾ , ಪ್ರೇವೆಟ್ ಕಂಪನಿಯವರು ವಾರಕ್ಕೆ ಒಂದೆರಡು ಭಾರಿಯಾದರೂ ಈ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡರೆ ಒಳ್ಳೆಯದಾಗುತ್ತದೆ. ಕೇವಲ ನಮ್ಮ ದೇಶದಲ್ಲಿ ನಡೆಯುವ ಕ್ರಿಕೇಟನಂತಹ ಆಟದಲ್ಲಿ ಕೊಟ್ಯಾಂತರ ರೂಪಾಯಿಗಳನ್ನು ವ್ಯರ್ತವಾಗಿ ಖಚರ್ು ಮಾಡುತ್ತಿರುವುದು ಕಂಡುಬರುತ್ತದೆ. ಇತಂಹದರ ಬದಲು ಸರಕಾರಿ ಶಾಲೆಗಳತ್ತ ಯುವಕರು ಗಮನ ಹರಿಸಿದರೆ ನಮ್ಮ ನಾಡಿನಲ್ಲಿ ಅನೇಕ ಬಡ ಪ್ರತಿಭಾವಂತ ಮಕ್ಕಳು ಉನ್ನತವಾದ ಸಾಧನೆಗಳನ್ನು ಮಾಡಿ ದೇಶಕ್ಕೆ ಒಳ್ಳೆಯ ಹೆಸರನ್ನು ತಂದೇ ತರುತ್ತಾರೆ ಎಂದು ಹೇಳಿದರು.

     ಸರಕಾರಿ ಶಾಲೆಗಳತ್ತ ಇದೇ ರೀತಿ ಗ್ರಾಮಸ್ಥರು ಆಸಕ್ತಿ ತೋರಿಸಿದರೆ ಇನ್ನು ಮುಂದೆ ನಮ್ಮ ಮಕ್ಕಳು ಖಾಸಗಿ ಶಾಳೆಗಳತ್ತ ಹೋಗುವುದು ಕಡಿಮೆಯಾಗಿ ಸರಕಾರದ ಉನ್ನತವಾದ ಆಕಾಂಕ್ಷೆಗಳಲ್ಲಿ ಒಂದಾದ ಬಡವ ಶ್ರೀಮಂತರೆನ್ನದೇ  ಎಲ್ಲರಿಗೂ ಸಮಾನವಾದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ ಎಂದು ಕಲಕೇರಿಯ ಗಣ್ಯ ವ್ಯಾಪಾರಸ್ಥರಾಧ ನೀಲ್ಲಪ್ಪ ಗುಡಗುಂಟಿ ಮಾತನಾಡಿದರು.

    ಪ್ರಕಾಶ ಯರನಾಳ , ಜವಾಹರ ಕುಲಕಣರ್ಿ, ಸಿದ್ದು ಪುಜಾರಿ.. ಎಸ್.ಆಯ್.ಕುಮಟಗಿ. .ಬಸವರಾಜ ಹಡಪದ. ಬಸವರಾಜ ಗುಡಿಸಲಮನಿ, ವಿಜೇಂದ್ರ ಇರಕಲ್, ವೆಂಕು ವಡ್ಡರ, ಮಂಜುನಾಥ ಬಡಿಗೇರ, ಮಾಂತೇಶ ಹೊಸಮನಿ, ಪಾಂಡು ಬಜಂತ್ರಿ, ಎಂ.ಪಿ.ಎಸ್.ಶಾಲೆಯ ಮುಖ್ಯ ಗುರುಗಳಾದ ವಾಯ್.ಬಿ.ಭಜಂತ್ರಿ, ಕೆ.ಜಿ.ಎಸ್.ಶಾಲೆಯ ಮುಖ್ಯಗುರುಗಳಾದ ಸಿ.ಎಂ.ಸಾಲಿಮಠ, ಎಂ.ಎಲ್.ವಡ್ಡರ, ಎಸ್.ಬಿ.ತಳವಾರ, ವಿ.ಕೆ.ಗಣಾಚಾರಿ, ಡಿ.ಎಸ್.ಬಿರಾದಾರ, ಎಂ.ಡಿ.ಕೆರಕಿ. ,ಎ.ಎಂ.ವಾಲಿಕಾರ ,ಶಿಕ್ಷಕ ಸಿಬ್ಬಂದಿ ಹಾಗೂ ಗ್ರಾಮಸ್ಥರು, ಪಾಲಕರು ಭಾಗವಹಿಸಿದರು.