ಲೋಕದರ್ಶನವರದಿ
ಬ್ಯಾಡಗಿ05: ಕಾಯಕ ತತ್ವದಡಿ ಅವರು ಶೈಕ್ಷಣಿಕ ರಂಗಕ್ಕೆ ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಶ್ರೀಗಳು ಸಲ್ಲಿಸಿದ ಸೇವೆ "ನಭೂತೋ ನಭವಿಷ್ಯತಿ" ಎಂದು ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ತುಮಕೂರಿನ ಶಿವೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಚನ್ನಬಸಪ್ಪ ದೊಡ್ಡಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಶಿಫಾರಸುಗಳಿಲ್ಲದೇ ಎಲ್ಲ ಜಾತಿ ವರ್ಗಗಳ ಮಕ್ಕಳಿಗೆ ಅನ್ನ ಮತ್ತು ಶಿಕ್ಷಣ ಕೊಡುವ ಮೂಲಕ ರಾಜ್ಯದ ಕೀತರ್ಿಯನ್ನು ಹೆಚ್ಚಿಸಿದ್ದಾರೆ, ಅವರು ಇಂದು ನಮ್ಮನ್ನಗಲಿದ್ದರೂ ಸಹ ಇಂದಿಗೂ ಅವರು ಮಾಡಿದ ಸಾಧನೆಗಳು ನಮ್ಮ ಕಣ್ಮುಂದೆ ಇವೆ, ಅಂತಹ ಸಮಾಜ ಸೇವಕರೊಬ್ಬರನ್ನು ಕಳೆದುಕೊಂಡ ಪ್ರಸ್ತುತ ಸಮಾಜ ಬಡವಾಗಿದೆ ಎಂದರು.
ಅನ್ನ-ಅರಿವು-ಅಕ್ಷರ ಇವುಗಳ ಜೊತೆಗೆ ಕಾಯಕತತ್ವದೊಂದಿಗೆ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದ ಸಿದ್ಧಗಂಗಾಶ್ರೀಗಳ ಸೇವೆ ಅವಿಸ್ಮರಣೀಯ ಮತ್ತು ಶ್ರೀಗಳು ಎಲ್ಲರ ಹೃದಯಾಂತರಾಳದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದರು.ಗ್ರಾಮದಲ್ಲಿನ ಬಸ್ ನಿಲ್ದಾಣದ ಬಳಿ ಶ್ರೀಗಳ ಭಾವಚಿತ್ರಕ್ಕೆ ಮೇಣದಬತ್ತಿ ಬೆಳಗಿಸಿ ಸಿಹಿ ಹಂಚುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು.
ಸೋಮಯ್ಯ ಹಿರೇಮಠ, ಗುರುಪಾದಪ್ಪ ಗೂಳೇರ, ರಾಮನಗೌಡ್ರ ಶಿಡ್ರಳ್ಳಿ, ದೇವೆಂದ್ರಪ್ಪ ಗೂಳೇರ, ಚಂದ್ರಪ್ಪ ಲಂಕೇರ, ಮಲ್ಲನಗೌಡ ಮುದಿಗೌಡ್ರ, ಮೈಲಾರಪ್ಪ ಜಾಡರ, ನಾಗಪ್ಪ ಹರಿಜನ, ರಾಜು ಜಾಡರ, ಶಿವಾನಂದ ಗೂಳೇರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.