ಘಟಪ್ರಭಾ 27: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ 3 ವರ್ಷದ ಮಗುವೊಂದರ ಮೇಲೆ ಹಂದಿಗಳ ಗುಂಪು ದಾಳಿ ಮಾಡಿ ಮಗುವನ್ನು ತೀವ್ರವಾಗಿ ಗಾಯಗೊಳಸಿದ ಪರಿಣಾಮ ಮಗುವನ್ನು ಇಲ್ಲಿಯ ಜೆ.ಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಲ್ಲಿಯ ಬೆಲ್ಲದ ಪೇಟೆಯ ನಿವಾಸಿ ಸುಭಾನಿ ಗೌಂಡೇಗಾರ ಅವರ 3 ವರ್ಷದ ಮಗು ಅಬುಬಕರ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಎದುರಿನಿಂದ ಬಂದ ಹಂದಿಗಳ ಗುಂಪವೊಂದು ಮಗುವಿನ ಮೇಲೆ ಏಕಾ ಏಕಿ ದಾಡಿ ಮಾಡಿ ಎಳೆದಾಡಲು ಪ್ರಾರಂಬಿಸಿವೆ ಇದನ್ನು ಗಮನಿಸಿದ ಅಕ್ಕಪಕ್ಕದ ಜನರು ಮಗುವನ್ನು ಹಂದಿಗಳ ಬಾಯಿನಿಂದ ಬಿಡಿಸಿದ್ದಾರೆ. ಅಷ್ಟರಲ್ಲಿ ಮಗುವಿಗೆ ತೀವ್ರ ರಕ್ತಸ್ರಾವ ಪ್ರಾರಂಭಿವಾಗಿದ್ದರಿಂದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚುತ್ತಿದೆ ಹಂದಿಗಳ ಹಾವಳಿ : ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಹಂದಿಗಳ ಹಾವಳಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಹಂದಿ ಸಾಗಾನೆಕೆದಾರರು ಹಂದಿಗಳನ್ನು ಪಟ್ಟಣದಲ್ಲಿ ಬೇಕಾ ಬಿಟ್ಟಿಯಾಗಿ ಬಿಟ್ಟಿದ್ದಾರೆ. ಪಟ್ಟಣದ ಪ್ರತಿವೊಂದು ಓಣಿಯಲ್ಲಿ ಹಂದಿಗಳು ಗುಂಪು ಗುಂಪಾಗಿ ರಾಜಾ ರೋಷವಾಗಿ ಓಡಾಡುತ್ತಿರುವುದುರಿಂದ ಇಲ್ಲಿಯ ಜನರು ಈ ಹಂದಿಗಳಿಂದ ಬೇಸತ್ತು ಹೋಗಿದ್ದಾರೆ. ಈ ಹಂದಿಗಳು ಜನರ ಮನೆಗಳಿಗೆ ನುಗ್ಗಿ ಮನೆಯಲ್ಲಿನ ಸಾಮಾನಗಳನ್ನು ಎಳೆದಾಡಿದ ಘಟನೆಗಳು ಕೂಡಾ ಅನೇಕಬಾರಿ ನಡೆದಿವೆ. ಈ ಹದಿಗಳ ಗುಂಪುಗಳು ರಸ್ತೆಗಳಲ್ಲಿ ನಿಂತಿರುವದನ್ನು ಕಂಡು ಜನರು ತಮ್ಮ ರಸ್ತೆಯನ್ನು ಬದಲಿಸುವ ಸ್ಥಿತಿ ನಿಮರ್ಾಣವಾಗಿದೆ. ಅಲ್ಲದೇ ಇದರಿಂದ ಪಟ್ಟಣದಲ್ಲಿ ರೋಗಗಳು ಹರಡುವ ಭೀತಿಕೂಡಾ ಎದುರಾಗಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯತ ಅಧಿಕಾರಿಗಳು ಕಂಡು ಕಾಣದಂತೆ ಮೌನ ವಹಿಸಿದ್ದಾರೆ. ಈಗಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಹಂದಿಗಳನ್ನು ಪಟ್ಟಣದಿಂದ ಹೊರಹಾಕಿ ಪಟ್ಟಣದ ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ನೋಟ್: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಹಂದಿಗಳನ್ನು ಸಾಕುವವರು ಯಾವುದೇ ಭಯವಿಲ್ಲದೆ ಹಂದಿಗಳನ್ನು ತಂದು ಪಟ್ಟಣದಲ್ಲಿ ಬಿಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ವಾಸಿಸುವುದು ಕಠಿಣವಾಗಿದೆ. ಸಂಬಂದಿಸಿದ ಅಧಿಕಾರಿಗಳು ಕೂಡಲೇ ಈ ಹಂದಿಗಳ ನಿಯಂತ್ರಸಲು ಕ್ರಮ ಕೈಗೊಳ್ಳಬೇಕು.
ಅಪ್ಪಾಸಾಬ ಮುಲ್ಲಾ, ತಾಲೂಕಾಧ್ಯಕ್ಷರು ಕನ್ನಡ ಸೇನೆ