ಬಾಗೇವಾಡಿಯವರಿಂದ ಬೃಹತ್ ರುದ್ರಾಕ್ಷಿ ಮಾಲೆ ಅರ್ಪಣೆ

ಲೋಕದರ್ಶನವರದಿ

ಶಿಗ್ಗಾವಿ20: ಪಟ್ಟಣದ ವೀರಗಲ್ಲಿಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಗೌಳಿ ಓಣಿಯ ನಿವಾಸಿ ತುಕಾರಾಮ ಪುಂಡಲಿಕಪ್ಪ ಬಾಗೇವಾಡಿ ಅವರು ಬೃಹತ್ ರುದ್ರಾಕ್ಷಿ ಮಾಲೆಯನ್ನು  ಅಪರ್ಿಸಿ ಭಕ್ತಿ ಭಾವ ಮೆರೆದರು.

11 ಸಾವಿರ ರುದ್ರಾಕ್ಷಿಗಳಿಂದ ತಯಾರಿಸಿದ ಈ ಬೃಹತ್ ರುದ್ರಾಕ್ಷಿ ಮಾಲೆಯನ್ನು  ಪಟ್ಟಣದ ಪೋಸ್ಟ ಆಫೀಸ್ ಹತ್ತಿರ ಇರುವ ಆಂಜನೆಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ರಥೋತ್ಸವಕ್ಕೆ ಅಪರ್ಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಬಾಗೇವಾಡಿ, ರಮೇಶ ವನಹಳ್ಳಿ, ಮಂಜುನಾಥ ಬಂಡಿವಡ್ಡರ, ಭೀಮಣ್ಣ ಕಾಳೆ, ಶಿವಪ್ಪ ಗಂಜೀಗಟ್ಟಿ ಸೇರಿದಂತೆ ಇತರರು ಇದ್ದರು.