ಅಕ್ರಮ ಪೈಪ್ಲೈನ್, ವಿದ್ಯುತ್ ತೆರವಿಗೆ ಎಸಿ ಗಾಗರ್ಿ ಜೈನ್ ಸೂಚನೆ

ತಾಲೂಕು ಸಮೀಪದ ದೇವಸಮುದ್ರ ಬಳಿಯ ಎಂ.1 ಡಿಸ್ಟ್ರೀಬ್ಯೂಟರ್ನ ನಾಲೆಗೆ ಹೊಸಪೇಟೆ ಎಸಿ ಗಾಗರ್ಿ ಜೈನ್ ಅವರು ದಿಢೀರ್ ಭೇಟಿ ನೀ


ಕಂಪ್ಲಿ04: ತಾಲೂಕು ಸಮೀಪದ ದೇವಸಮುದ್ರ ಬಳಿಯ ಎಂ.1 ಡಿಸ್ಟ್ರೀಬ್ಯೂಟರ್ನ ನಾಲೆಗೆ ಅಕ್ರಮ ಪೈಪ್ಗಳ ಹಾವಳಿಯಿಂದ ಡಿಸ್ಟ್ರೀಬ್ಯೂಟರ್ನ ತೈಲ್ಯಾಂಡಿಗೆ ನೀರು ತಲುಪುತ್ತಿಲ್ಲ ಎಂಬ ರೈತರ ದೂರಿನ ಹಿನ್ನಲೆಯಲ್ಲಿ ಹೊಸಪೇಟೆ ಎಸಿ ಗಾಗರ್ಿ ಜೈನ್ ಅವರು ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. 

ಈ ಡಿಸ್ಟ್ರೀಬ್ಯೂಟರ್ ಭಾಗದಲ್ಲಿ ಸಾಕಷ್ಟು ರೈತರು ಭತ್ತದ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಅಕ್ರಮ ಪೈಪ್ಗಳ ನೀರಿನ ಸೋರಿಕೆಯಿಂದ ಕಾಲುವೆಯ ಕೊನೆ ಭಾಗಕ್ಕೆ ನೀರು ಸಿಗದೇ ರೈತರು ಬೆಳೆದ ಬೆಳೆಗಳು ಹಾಳಾಗುತ್ತಿವೆ. ಎಸಿ ಅವರು ಅಕ್ರಮ ಪೈಪ್ಗಳ ತೆರವು ಹಾಗೂ ಅಕ್ರಮ ವಿದ್ಯುತ್ಗಳನ್ನು ಸ್ಥಗಿತಗೊಳಿಸಲು ಸೂಚಿಸಿದ್ದರು. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಕ್ರಮ ಪೈಪ್ಗಳ ಹಾವಳಿ ಹಾಗೂ ಅಕ್ರಮ ವಿದ್ಯುತ್ ಸ್ಥಗಿತಗೊಳಿಸಲು ಹಿಂದೇಟು ಹಾಕಿದ್ದರಿಂದ ಗರಂ ಆದ ಎಸಿ ಅವರು ಸಂಜೆ ಒಳಗಾಗಿ ಅಕ್ರಮ ಪೈಪ್ಲೈನ್ ಹಾಗೂ ಅಕ್ರಮ ವಿದ್ಯುತ್ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಕಡಖ್ ಎಚ್ಚರಿಕೆ ನೀಡಿದರು. ಮತ್ತು ಬೇಜವಾಬ್ದಾರಿ ಕೆಲಸ ಮಾಡುತ್ತಿರುವುದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರಾವರಿ ಇಲಾಖೆಯವರು 238 ಎಕರೆ ಸಾಗುವಳಿಯಲ್ಲಿ ಒಂದು ಸಾವಿರ ಅಕ್ರಮ ಪೈಪ್ಗಳಿವೆ ಎಂಬ ಮಾಹಿತಿ ನೀಡಿದ್ದರು. ಆದರೆ, ಈ ಭಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ಪೈಪ್ಗಳಿವೆ ಎಂದು ರೈತರು ಆರೋಪಿಸಿದರು. 

ನಂತರ ಎಸಿ ಗಾಗರ್ಿ ಜೈನ್ ಅವರು ಮಾತನಾಡಿ, ನೀರಾವರಿ ಹಾಗೂ ಜೆಸ್ಕಾಂ ಅಧಿಕಾರಿಗಳು ಕೂಡಲೇ ಅಕ್ರಮ ಪೈಪ್ ಹಾಗೂ ಅಕ್ರಮ ವಿದ್ಯುತ್ಗಳಿಗೆ ಕಡಿವಾಣ ಹಾಕಿ, ತೈಲ್ಯಾಂಡ್ನ ರೈತರ ಬೆಳೆಗಳಿಗೆ ನೀರು ಒದಗಿಸುವಂತೆ ಸೂಚಿಸಿದರು. ರೈತರ ವಿಷಯದಲ್ಲಿ ಅಧಿಕಾರಿಗಳು ಕೆಲಸ ಮಾಡದಿದ್ದರೆ, ಡಿಸಿ ಅವರಿಗೆ ಮಾಹಿತಿ ನೀಡಿ, ನೋಟೀಸ್ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಶರಣಮ್ಮ ಕಾರಿ, ಡಿಟಿ ಬಿ.ರವೀಂದ್ರಕುಮಾರ್, ನೀರಾವರಿ ಹಾಗೂ ಜೆಸ್ಕಾಂ ಅಧಿಕಾರಿಗಳು ಹಾಗೂ ಕಂಪ್ಲಿ-ಕೊಟ್ಟಾಲ್, ದೇವಸಮುದ್ರ ಹಾಗೂ ಶಂಕರ್ಸಿಂಗ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.