ಹೂವಿನಹಡಗಲಿ: ಜಾನಪದ ಕಲೆಗಳಿಗೆ ಪ್ರೋತ್ಸಾಹ ಕೊರತೆ

ಲೋಕದರ್ಶನ ವರದಿ

ಹೂವಿನಹಡಗಲಿ 19: ತಂತ್ರಜ್ಞಾನದ ಯುಗದಲ್ಲಿ ಪುರಾತನ ಗ್ರಾಮೀಣ ಜಾನಪದ ಕಲೆಗಳು ನೈತಿಕ ಬದುಕಿಗೆ ಜನಪದ ಕಲೆಗಳು ಹಾಸುಹೊಕ್ಕಾಗಿವೆ ಆದರೆ ಈಚೆಗೆ ಸಿನಿಮಾಗಳ ಹಾವಳಿಗೆ  ನಾಶಸಿ ಹೊರಟಿವೆ ಎಂದು ಎಂದು ಗ್ರಾ.ಪಂ.ಸದಸ್ಯ ಡಿ.ರಮೇಶ ಕಳಕಳ ವ್ಯಕ್ತಪಡಿಸಿದರು.

ತಾಲೂಕಿನ ಮಾಗಳ ಗ್ರಾಮದ ಎಸ್.ವಿ.ಟಿ.ಡಿ. ಬಯಲು ವೇದಿಕೆಯಲ್ಲಿ ಸ್ಥಳೀಯ ವೀರಮದಕರಿ ನಾಯಕ ಯುವಕ ಸಂಘ ಮತ್ತು ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಸರಾ ನಿಮಿತ್ತ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸಂಪ್ರದಾಯಿಕ ಸುಗಮ ಸಂಗೀತ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಿನಿಮಾ, ಟಿ.ವಿಯಿಂದ ಗ್ರಾಮೀಣ ಭಾಗದಲ್ಲಿ ಸುಗ್ಗಿಯ ಹಾಡು, ಬಯಲಾಟ, ದೊಡ್ಡಾಟ, ನಾಟಕ, ಲಾವಣಿ ಪದಗಳು ಮುಂತಾದ ಜಾನಪದ ಕಲೆಗಳು ನಶಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಉಮೇಶ ವಹಿಸಿದ್ದರು. ಅತಿಥಿಗಳಾಗಿ ಕಲಾ ಪೋಷಕ ಲಕ್ಕಣ್ಣನವರ ಮಂಜುನಾಥ, ತೊಳಲಿ ಬಸವರಾಜ, ಅಂದಾನಪ್ಪ, ತಾಲೂಕು ವಿಕಲಚೇತನರ ಅಧ್ಯಕ್ಷ ಜೆ.ನಿಂಗರಾಜ, ಪ್ರಭಾರಿ ಮುಖ್ಯ ಶಿಕ್ಷಕ ಅಂದಾನಸ್ವಾಮಿ, ಶಿಕ್ಷಕ ಓ.ಎಂ.ವೀರಯ್ಯ ಇದ್ದರು. ನಂತರ ಸಂಗೀತ ಕಾರ್ಯಕ್ರಮವನ್ನು ಪಾಂಡು, ಚಂದ್ರಪ್ಪ ಬಡಿಗೇರ, ಟಿ.ರಾಮಪ್ಪ, ಬಿ.ಎಂ.ಪರಶುರಾಮ ತಂಡದವರು ನಡೆಸಿಕೊಟ್ಟರು. ಆರಂಭದಲ್ಲಿ ಶಿಕ್ಷಕ ಆನಂದಗಡ್ಡಿ ಸ್ವಾಗತಿಸಿ ನಿರೂಪಿಸಿದರು. ವೀರೇಶ ವಂದಿಸಿದರು.