ಲೋಕದರ್ಶನ ವರದಿ
ಹೂವಿನಹಡಗಲಿ 21: ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯ ಜತೆಗೆ ಅನಧಿಕೃತ ಮಧ್ಯ ಮಾರಾಟವನ್ನು ಕೂಡಲೇ ನಿಷೇಧಿಸಬೇಕೆಂದು ಸೊನ್ನ ಗ್ರಾಮದ ಭೀಮ ಸಂಘದ ಅಧ್ಯಕ್ಷೆ ಹುಲಿಗೆಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಸೊನ್ನ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮ ಪಂಚಾಯ್ತಿ,ಭೀಮಸಂಘ ಮತ್ತು ದಿ.ಕನ್ಸ್ನ್ಡರ್್ ಫಾರ್ ವಕರ್ಿಂಗ್ ಚಿಲ್ಡ್ರನ್ (ಸಿಡಬ್ಲ್ಯುಸಿ) ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾನ ಬೀಡ ಅಂಗಡಿಗಳಲ್ಲಿ ಅನಧಿಕೃತ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಜತೆಗೆ ಸರ್ಕಾರಿ ಯೋಜನೆಗಳು ಹಳ್ಳಿಯ ದುಡಿಯುವ ಜನರಿಗೆ ಸಹಕಾರಿಯಾಗಿಲ್ಲ, ಕೂಡಲೇ ಕೃಷಿ ಕೂಲಿ ಕಾಮರ್ಿಕರಿಗೆ ಸಮರ್ಪಕ ಉದ್ಯೋಗ ಸೇರಿದಂತೆ ನಾನಾ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಬೋಗೇಶ್ವರಯ್ಯ ಪ್ರತಿಕ್ರಿಯಿಸಿ ಮಕ್ಕಳ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದೇವೆ.ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳತ್ತೇವೆ ಎಂದು ಭರವಸೆ ನೀಡಿದರು. ಸರ್ಕಾರ ಶುದ್ದ ನೀರಿನ ಘಟಕ ತೆರೆದಿದ್ದರೂ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಜಯಮ್ಮ ಸಮಸ್ಯೆಯನ್ನು ಸಭೆಗೆ ತಿಳಿಸಿದರು.
ಸಿಡಬ್ಲ್ಯುಸಿ ಹೊಳಗುಂದಿ ಎಸ್.ಕೊಟ್ರೇಶ, ಭೀಮ ಸಂಘದ ಸದಸ್ಯರಾದ ಕೆ.ರಂಜಿತ, ಗಾಯತ್ರಿ, ಪೂಜಾ, ಎಎಸ್ಐ ವಿಶ್ವೇಶ್ವರಯ್ಯ, ಗ್ರಾ.ಪಂ.ಅಧ್ಯಕ್ಷ ಡಿ.ದುರುಗಪ್ಪ, ಸದಸ್ಯರಾದ ನೀಲಪ್ಪ, ರಾಮಮೂತರ್ಿ, ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಹೆಚ್.ಪ್ರಕಾಶ್, ದೈಹಿಕ ಶಿಕ್ಷಕ ಕೊಟ್ರೇಶ, ಉಮೇಶ, ಮಂಗಳಾಗೌರಿ, ಶಿಕ್ಷಕ ಹೆಚ್.ಸುರೇಶ, ಬಿ.ನಾಗಭೂಷಣ, ಎ.ಎಂ.ಪಿ.ವಿಶ್ವನಾಥ ಇದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತರು, ಅಶಾ ಕಾರ್ಯಕರ್ತರು, ಡಾನ ಭಾಸ್ಕೋಸಂಸ್ಥೆ, ಗ್ರಾಮದ ಸುತ್ತಮುತ್ತಲಿನ ಗ್ರಾಮದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಕ್ಕೆ ಪರಿಹಾರ ಸ್ಪಂದಿಸಿದ್ದಕ್ಕೆ ಪಂಚಾಯ್ತಿ ಎದುರಿನ ಮರಕ್ಕೆ ಬಿಳಿ ಬಟ್ಟೆಯನ್ನು ಹಾಗೂ ಸಮಸ್ಯೆಗಳ ಬಗ್ಗೆ ಕೆಂಪು ಬಟ್ಟೆಯನ್ನು ಭೀಮಾ ಸಂಘದವರು ಕಟ್ಟಿದರು.