ಲೋಕದರ್ಶನ ವರದಿ
ಹೂವಿನಹಡಗಲಿ 20: ಹೊಸ ದ್ವಿಚಕ್ರ,ವಾಹನಗಳನ್ನು ನೋಂದಾಯಿಸಲಿಕ್ಕೆ ಆರ್ಟಿಓ ಕಚೇರಿಯಲ್ಲಿ ಹೋದರೆ ಅಲ್ಲಿ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದ್ದು ಹಣ ವಸೂಲಿಗೆ ನಿಲ್ಲುತ್ತಾರೆ ಕೂಡಲೇ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಜತೆಗೆ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ತಡೆಯಬೇಕು ಎಂದು ಆರ್ಟಿಐ ಕಾರ್ಯಕರ್ತ ಚಂದ್ರಶೇಖರ ಸಭೆಗೆ ಗಮನಕ್ಕೆ ತಂದರು.
ಇಲ್ಲಿನ ತಾ.ಪಂ.ಮಲ್ಲಿಗೆ ಸಭಾಂಗಣದಲ್ಲಿ ಬುಧವರಾ ನಡೆದ ಹೊಸಪೇಟಿ ಲೋಕಾಯುಕ್ತ ವತಿಯಿಂದ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು ಆರ್ಟಿಓ ಕಚೇರಿಗೆ ಹೋದರೆ ಅಧಿಕಾರಿಗಳು, ಮಧ್ಯವರ್ತಿಗಳು ಯಾರು ಎಂಬುದು ಗೊತ್ತಾಗಲ್ಲ ಕೂಡಲೇ ಅಧಿಕಾರಿಗಳು ಗುರುತಿನ ಚೀಟಿಯನ್ನು ಕೊರಳಲ್ಲಿ ಇದ್ದಾರೆ ಸಾರ್ವಜನಿಕರಿಗೆ ತೊಂದರೆಯಾಗಲ್ಲ ಎಂದಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಎ.ವಸಂತ ಮಾತನಾಡಿ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಕರ್ಾರದ ಸೂತ್ತಲೆಯಂತೆ ಗುರುತಿನ ಚೀಟಿ ಎಲ್ಲರೂ ಕೊರಳಲಿ ಹಾಕಿಕೊಳ್ಳಬೇಕು ಎಂದ ಅವರು ಮಧ್ಯವತರ್ಿಗಳ ಹಾವಳಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ತಹಶೀಲ್ದಾರ ಕೆ.ರಾಘವೇಂದ್ರರಾವ್ ಮಾತನಾಡಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಹಣಿ ತಿದ್ದುಪಡಿ ವಿಳಂಬ,ಪಿಂಚಣೆಯಲ್ಲಿ ಕೆಲವೊಂದು ಲೋಪಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದ ಅವರು ಇಲಾಖೆ ಅನುದಾನದಲ್ಲಿ ಸಿಬ್ಬಂದಿಗೆ ಗುರುತಿನ ಚೀಟಿ ವಿತರಿಸುತ್ತೇನೆ ಎಂದರು.
ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಯು.ಎಚ್.ಸೋಮಶೇಖರ ಮಾತನಾಡಿ ದೇವಗೊಂಡನಹಳ್ಳಿ ಗ್ರಾ.ಪಂ.ಯ ಸಮಸ್ಯೆಯಲ್ಲಿ ಆರ್ಟಿಐ ಕಾರ್ಯಕರ್ತ ನಂದಿಹಳ್ಳಿ ಮಹೇಂದ್ರ ಅವರು ನನ್ನ ಮೇಲೆ ವಿನಾ ಕಾರಣ ಆರೋಪ ಮಾಡಿ ನನ್ನ ಬಗ್ಗೆ ಇಲ್ಲಸಲ್ಲದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವದರಿಂದ ನನಗೆ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಮಹೇಂದ್ರ ಅವರ ಮೇಲೆ ನ್ಯಾಯಾಲಯ ಮೊರೆ ಹೋಗುತ್ತೇನೆ ಎಂದ ಎಚ್ಚರಿಸಿದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.