ಹೂವಿನಹಡಗಲಿ: ವಿದ್ಯುತ್ ತಂತಿ ಹರಿದು ನಾಲ್ಕು ಆಕಳು ಸಾವು

ಲೋಕದರ್ಶನ ವರದಿ 

ಹೂವಿನಹಡಗಲಿ 25: ವಿದ್ಯುತ್ ತಂತಿ ತುಂಡಾಗಿ ಬಿದ್ದು ನಾಗತಿಬಸಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ನಾಲ್ಕು ಆಕಳು ಸತ್ತಿವೆ. ರೈತ ಶಿವಣ್ಣನವರ ಪ್ರಕಾಶ್ ಎಂಬುವವರಿಗೆ ಸೇರಿದ್ದಾಗಿವೆ. ಮನೆ ಮುಂದೆ ಹಾದು ಹೋದ ವಿದ್ಯುತ್ ತಂತಿ ಹರಿದು ಆಕಳುಗಳನ್ನು ಕಟ್ಟಿದ್ದ ಶೆಡ್ನ ತಗಡಿನ ಮೇಲೆ ಬಿದ್ದಿದೆ. ತಗಡುಗಳು ಆಕಳುಗಳ ಮೇಲೆ ಬಿದ್ದಿದ್ದು, ವಿದ್ಯುತ್ ಸ್ಪಶರ್ಿಸಿ ಬೆಂಕಿ ಹೊತ್ತ್ತಿಕೊಂಡಿದೆ. 

ತರಾಟೆ: 

ವಿದ್ಯುತ್ ತಂತಿ ರಾತ್ರಿ ಸಮಯದಲ್ಲಿ ತುಂಡಾಗಿ ಬಿದ್ದು ಬೆಂಕಿ ಕಾಣಿಸಿಕೊಂಡ ಸಮಯ ಹಲವು ಬಾರಿ ದೂರವಾಣಿ ಮೂಲಕ ಜೆಸ್ಕಾಂ ಅಧಿಕಾರಿಗಳ ಸಂಪಕರ್ಿಸಿದರೂ ಸ್ಪಂದಿಸಲಿಲ್ಲ ಎಂದು ಗ್ರಾಮಸ್ಥರು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಜೆಸ್ಕಾಂ ಎಇಇ ಮೋಟ್ಲಾನಾಯ್ಕರನ್ನು ತರಾಟೆ ತೆಗೆದುಕೊಂಡರು. ಸ್ಥಳಕ್ಕೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ನಷ್ಟ ಪರಿಹಾರ ಕೊಡಿಸಲಾಗುವುದು. ಗ್ರಾಮದಲ್ಲಿ ದುಸ್ಥಿತಿಯಲ್ಲಿರುವ ವಿದ್ಯುತ್ ಕಂಬ, ವೈರ್ಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.