ಲೋಕದರ್ಶನ ವರದಿ
ಹೂವಿನಹಡಗಲಿ 07: ಪಟ್ಟಣದ ಪುರಸಭೆಯ ವತಿಯಿಂದ 1.13ಕೋಟಿ ರೂ.ವೆಚ್ಚದಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಚಾಲನೆಗೆ ನೀಡಿದರು.
ರಂಗಭಾರತಿ ಪಾರ್ಕನಲ್ಲಿ ವ್ಯಾಯಮ ಸಲಕರಣೆಗಳನ್ನು ಖರೀದಿಸಲಿಕ್ಕೆ 4.60ಲಕ್ಷ ರೂ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಲಂಕಾರಿಕ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ 5ಲಕ್ಷ ರೂಸಿಸಿ ರಸ್ತೆ ಕಾಮಗಾರಿಗಳು ಸೇರಿದಂತೆ ನಾನಾ ಅಭಿವೃದ್ದಿಗೆ ಸುಮಾರು 1.13ಕೋಟಿ ರೂ. ವಿಕಲಚೇತನ ಸ್ನೇಹಿ ಶೌಚಾಲಯ ನಿಮರ್ಾಣಕ್ಕೆ 4.84ಲಕ್ಷ ರೂ ಆಗಸ್ಟ್ 15ರ ಪಾಕರ್ಿನಲ್ಲಿ ಮಕ್ಕಳಿಗೆ ಅಟಿಕೆ ಉಪಕರಣಗಳ ಖರೀದಿಗೆ 0.75ರೂ.ಹೊಸ ಬಸ್ ನಿರ್ಮಾಣದ ಬೀದಿ ದೀಪಗಳಿಗೆ 4.20ಲಕ್ಷ ರೂ ಕೆ.ಇಬಿ ವೃತ್ತದಲ್ಲಿ ಹೈಮಾಸ್ಟ್ ಲೈಟ್ 5ಲಕ್ಷ ರೂ ಸೇವಾವಾಲ್ ಭವನದಲ್ಲಿ ಶೌಚಾಲಯ ನಿಮರ್ಾಣ ಕಾಮಗಾರಿಗೆ 12.28 ಲಕ್ಷ ರೂ. ಸೇರಿದಂತೆ 1.13 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಖನೀಜ ನಿಧಿಯಿಂದ 25 ಕೋಟಿ ರೂ.ಮಂಜೂರಾತಿಯಾಗಿದ್ದು, ಈಗಾಗಲೇ ಕೆರೆಗಳ ನಿಮರ್ಾಣ, ರಸ್ತೆ ಕಾಮಗಾರಿಗಳಿಗೆ, ಕುಡಿಯುವ ನೀರು, ಹೆಚ್ಚುವರಿ ಶಾಲೆಗಳ ಕೊಠಡಿಗಳ ನಿಮರ್ಾಣ ಸೇರಿದಂತೆ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಮೀಸಲಾಗಿದ್ದು ಸಧ್ಯದಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ವೀರಣ್ಣ, ಆರೋಗ್ಯ ನಿರೀಕ್ಷಕ ಶ್ರೀನಿವಾಸ, ಮುಖಂಡರಾದ ಬಿ.ಹನುಮಂತಪ್ಪ, ಚಂದ್ರನಾಯ್ಕ, ಮಹ್ಮದ್ ರಫಿ, ಫಕ್ಕೀರಪ್ಪ, ಪುರಸಭೆ ಸದಸ್ಯರಾದ ಐಗೋಳ ಸುರೇಶ, ಎಸ್.ತಿಮ್ಮಾಣ್ಣ, ಯು.ಹನುಮಂತಪ್ಪ, ಲೀಲಾ ಅಟವಾಳಗಿ ಇದ್ದರು.