ಹೂವಿನಹಡಗಲಿ: ನಂದಿಹಳ್ಳಿ ಸಂಪರ್ಕ ಗ್ರಾಮೀಣ ರಸ್ತೆಗೆ 1.02 ಕೋಟಿ ಖರ್ಚು 90 ದಿನಗಳಲ್ಲಿ ಕಿತ್ತು ಹೋದ ಡಾಂಬರ್ ರಸ್ತೆ

ಲೋಕದರ್ಶನ ವರದಿ

ಹೂವಿನಹಡಗಲಿ 03: ತಾಲೂಕಿನ ನಂದಿಹಳ್ಳಿ ಗ್ರಾಮದ ಸಂಪರ್ಕ ರಸ್ತೆ ನಿರ್ಮಿಸಿ ಇನ್ನೂ 90ದಿನಗಳು ಕಳೆದಿಲ್ಲ.ರಸ್ತೆ ಸಂಪೂರ್ಣ ಕಿತ್ತು ಹೋಗಿದೆ.ಡಾಂಬರು ಪದರು ಕಿತ್ತು ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ವಾಹನಗಳ ಓಡಾಟಕ್ಕೆ ಆಡಚನೆ ಉಂಟಾಗಿದೆ.

ಸೋಗಿ ಮುಖ್ಯ ರಸ್ತೆಯಿಂದ ನಂದಿಹಳ್ಳಿ ಗ್ರಾಮಕ್ಕೆ ಕಲ್ಪಿಸುವ 2.20 ಕಿ.ಮೀ.ಕೂಡು ರಸ್ತೆಗೆ 1.02 ಕೋಟಿ ಖಚರ್ು ಮಾಡಲಾಗಿದೆ ಇದೀಗ ಸಂಪೂರ್ಣ ಡಾಂಬರು ರಸ್ತೆ ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ.ಕಳೆದ ವರ್ಷ ದುರಸ್ತಿ ಕೈಗೊಳ್ಳಲಾಗಿತ್ತು. ಕಾಮಗಾರಿ ಕಳಪೆಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಬಂಡಿ,ದ್ವಿಚಕ್ರ ವಾಹನಗಳು ಓಡಾಟಕ್ಕೆ ತೀವ್ರತೊಂದರೆಯಾಗಿವೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಕಾಮಗಾರಿಯನ್ನು ನಿರ್ವಹಿಸಿದೆ.ಆದರೆ ಮೂರು ತಿಂಗಳಲ್ಲಿ ರಸ್ತೆ ಓಡಾಟಕ್ಕೆ ಯೋಗ್ಯವಿಲ್ಲ.ಬಸ್ ಚಾಲಕರು ನಂದಿಹಳ್ಳಿ ಗ್ರಾಮಕ್ಕೆ ಹೋಗಿಬರಲು ಹಿಂದೇಟು ಹಾಕುತ್ತಿದ್ದಾರೆ.ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.ಮೊದಲಿದ್ದ ಕಚ್ಚಾ ರಸ್ತೆ ಎಷ್ಟೋ ವಾಸಿ ಇತ್ತು.ಆದರೆ ಜನರು ಗುತ್ತಿಗೆದಾರರು, ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಹೆಚ್ಚು ಲಾಭದ ಆಸೆಯಿಂದ ತೀರಾ ಕಳಪೆ ಕಾಮಗಾರಿ ಮಾಡಿದ್ದಾರೆ. ತಾಲೂಕಿನ ಜನಪ್ರತಿನಿಧಿ,ಅಧಿಕಾರಿಗಳು ಶಾಮೀಲಾಗಿರುವುದರಿಂದ ಮೂರು ತಿಂಗಳಲ್ಲಿ 1.02 ಕೋಟಿ ವೆಚ್ಚದಲ್ಲಿ ರಸ್ತೆ ನಿಮರ್ಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಕೂಡಲೇ ಮೇಲಾಧಿಕಾರಿಗಳು ನಂದಿಹಳ್ಳಿ ರಸ್ತೆಯ ಸ್ಥಳ ಪರಿಶೀಲಿಸಿ ತನಿಖೆ ನಡೆಸಬೇಕು, ತಪ್ಪಿಸ್ಥರ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಗ್ರಾಮದ ಮುಖಂಡ ಪಿ.ವಿ.ಬಸವರಾಜ ಒತ್ತಾಯಿಸಿದ್ದಾರೆ.