ಲೋಕದರ್ಶನ ವರದಿ
ಹೂವಿನಹಡಗಲಿ 23: ಪಟ್ಟಣದಲ್ಲಿ ಶ್ರೀರಾಮ ದೇವರ ರಥೋತ್ಸವದ ಪ್ರಯುಕ್ತ ಜರುಗಿದ ಸಾಮೂಹಿಕ ಮದುವೆಯಲ್ಲಿ 14 ಜೊಡಿಗಳು ಹಸೆಮಣೆ ಏರಿದರು.
ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆ ಹಾಗೂ ಧರ್ಮಸಭೆಯ ಸಾನಿಧ್ಯವಹಿಸಿದ್ದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸರ್ವರ ಮನಸ್ಸು ಗೆದ್ದು ಪರಂಪರೆಯನ್ನು ಉಳಿಸಿ, ಬೆಳೆಸಿಕೊಂದು ಬಂದ ಗೌರವ ರಾಮಸ್ವಾಮಿ ವೆಂಕಟೇಶಯ್ಯನವರಿಗೆ ಸಲ್ಲುತ್ತದೆ ಎಂದರು. ಅವರ ಮಾರ್ಗದರ್ಶನ ಪದೆದು ದೇವಸ್ಥಾನದ ನೂತನ ಧರ್ಮಕರ್ತ ದಾ.ರಾಮಸ್ವಾಮಿ ರಾಕೇಶಯ್ಯ ಎಲ್ಲರ ಸಹಕಾರದಿಂದ ಅಭಿವೃದ್ಧಿಯ ಪಥದತ್ತ ನಡೆಸಿಕೊಂಡು ಹೋಗಲಿ ಎಂದರು. ವೆಂಕಟೇಶಯ್ಯನವರ ಧಾಮರ್ಿಕ ಕಳಕಳಿ ಅನನ್ಯವಾದುದು ಎಂದರು. ಆರೋಗ್ಯವಾಗಿ ಬಂದು ರಾಕೇಶಯ್ಯನವರರಿಗೆ ಹೆಚ್ಚಿನ ಮಾರ್ಗದರ್ಶನ ನೀಡಲಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರೇಮಲ್ಲನಕೆರೆ ವಿರಕ್ತಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠ ಮಂದಿರಗಳಲ್ಲಿ ಜರುಗಿದ ಸಾಮೂಹಿಕ ಮದುವೆಯಲ್ಲಿ ಹಸೆಮಣೆ ಏರಿದ ನೂತನ ದಂಪತಿಗಳು ಒಬ್ಬರನೊಬ್ಬರು ಅರಿತು ಬಾಳಬೇಕು ಎಂದು ಹೇಳಿದರು. ಹಡಗಲಿ ತಾಲೂಕಿನಲ್ಲಿ ವೆಂಕಟೇಶಯ್ಯನವರ ಸಮಾಜ ಸೇವೆ ಶ್ಲಾಘನೀಯವಾದುದು ಎಂದರು.
ದೇವಸ್ಥಾನದ ನೂತನ ಧರ್ಮಕರ್ತ ಡಾ.ರಾಮಸ್ವಾಮಿ ರಾಕೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ.ಚನ್ನಬಸಯ್ಯ, ಸಿ.ಕೆ.ಎಂ.ಬಸವಲಿಂಗಯ್ಯ, ಸೊನ್ನದ ಕೊಟ್ರಯ್ಯ ಒಡೆಯರ್ ಸಾಮೂಹಿಕ ಮದುವೆಯ ಪೌರೋಹಿತ್ಯವಹಿಸಿದ್ದರು.
ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಸ್.ಗೋಣೆಪ್ಪ, ಗುರುವಿನ ಕೊಟ್ರಯ್ಯ, ಗಡಿಗಿ ಮಲ್ಲಿಕಪ್ಪ, ಸಿಯು.ಎಂ.ಕೊಟ್ರಯ್ಯ, ಎಸ್.ತಿಮ್ಮಣ್ಣ, ಗಡಿಗಿ ವೀರಣ್ಣ, ಗಡಿಗಿ ಕೃಷ್ಣ, ಟಿ.ಸೋಮಪ್ಪ, ಸೊಪ್ಪಿನ ಮಲ್ಲಿಕಾರ್ಜುನ, ಸೊಪ್ಪಿನ ನಾಗಭೂಷಣ, ಪಿ.ಮಲ್ಲಿಕಾರ್ಜುನ, ಈಟಿ ಹನುಮೇಶ್, ಜೆ.ಶಿವರಾಜ, ಟಿ.ಮಹಾಂತೇಶ್, ಆರ್.ಚೈತನ್ಯ, ಟಿ.ಮಹಾಂತೇಶ, ಆರ್.ಫಕ್ಕೀರಪ್ಪ, ಟಿ.ರಾಮಮೂರ್ತಿ ಟಿ.ಕೃಷ್ಣಮೂತರ್ಿ, ಗುರುವಿನ ರಾಜು, ಟಿ.ಬಾಲರಾಜ್, ದಾಸರ ರಾಮಣ್ಣ, ಓಣಿಯ ಯುವಕರು ಇದ್ದರು. ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು