ಲೋಕದರ್ಶನ ವರದಿ
ಹೂವಿನಹಡಗಲಿ 18: ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಒಳಗೊಂಡು ಹೂವಿನಹಡಗಲಿ ನೂತನ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಪ್ರಗತಿಪರ ಸಂಘಟನೆಗಳು ಒಕ್ಕೂಟದ ಪದಾಧಿಕಾರಿಗಳು ಸಕರ್ಾರವನ್ನು ಒತ್ತಾಯಿಸಲಾಯಿತು.
ಬಳ್ಳಾರಿ ಜಿಲ್ಲೆಯ ಒಟ್ಟು 11 ತಾಲೂಕುಗಳನ್ನು ಹೊಂದಿದ್ದು, ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ 200ಕಿ.ಮೀ. ದೂರದಲ್ಲಿದೆ.ತಾಲೂಕಿನ ಗಡಿ ಗ್ರಾಮಗಳ ಜಿಲ್ಲಾ ಕೇಂದ್ರದಿಂದ.ದೂರದಲ್ಲಿವೆ. ಭೌಗೋಳಿಕವಾಗಿ ಜಿಲ್ಲೆ ಪಶ್ಚಿಮ ತಾಲೂಕುಗಳು ಸೌಲಭ್ಯದಿಂದ ವಂಚಿತವಾಗಿವೆ. ಎಲ್ಲಾ ಸೌಲಭ್ಯವನ್ನು ಹೊಂದಿರುವ ಹೂವಿನಹಡಗಲಿ ತಾಲೂಕು ನಾನಾ ಇಲಾಖೆ ವಿಭಾಗೀಯ ಕಚೇರಿಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದ್ದು, 15ವರ್ಷಗಳಿಂದ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಅನೇಕ ಬಾರಿ ಪ್ರತಿಭಟನೆ ಮೂಲಕ ಒತ್ತಾಯಿಸಲಾಗಿದೆ. ಕೂಡಲೇ ಸಕರ್ಾರ ಗಮನ ಹರಿಸಿ ಹಡಗಲಿ ಜಿಲ್ಲಾಕೇಂದ್ರವನ್ನಾಗಿ ಘೋಷಿಸುವಂತೆ ಮನವಿ ಯನ್ನು ಮುಖ್ಯಮಂತ್ರಿಗಳಿಗೆ ಮಾಡಲಾಗಿದೆ.
ರೈತಸಂಘದ ಗಂಗಾಧರ, ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಅಯ್ಯನಗೌಡ, ಎಂ.ಪರಮೇಶ್ವರಪ್ಪ, ಕಸಾಪ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಎಐಟಿಯುಸಿ ಶಾಂತರಾಜ,ಪರಶುರಾಮಪ್ಪ,ನಿವೃತ್ತ ಉಪನ್ಯಾಸಕ ಪರಮೇಶ್ವರಪ್ಪ,ಬಿ.ಎಲ್.ಶ್ರೀಧರ, ಅಂಗನವಾಡಿ ಸಂಘಟನೆ ಅಧ್ಯಕ್ಷೆ ಮಂಜುಳಾ,ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ ಜಿಲ್ಲಾ ಕೇಂದ್ರದಿಂದ ಸಾಕಷ್ಟು ದೂರದಲ್ಲಿದೆ. ಸಾರ್ವಜನಿಕರಿಗೆ ಆಡಳಿತಾತ್ಮಕ ಅನಾನೂಕೂಲತೆಗಳು ಉಂಟಾಗಿದ್ದು, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ರಚಿಸಬೇಕು ಎಂದು ಹೂವಿನಹಡಗಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಕೆ.ರಾಘವೇಂದ್ರರಾವ್ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈಗಾಗಲೇ ಶೈಕ್ಷಣಿಕ ಜಿಲ್ಲೆ ಕೇಂದ್ರಕ್ಕೆ ಒತ್ತಾಯಿಸಿ 2004ರಿಂದ ಇಲ್ಲಿಯವರೆಗೂ ಪ್ರತಿಭಟನೆ,ಉಪವಾಸ ಸತ್ಯಾಗ್ರಹ, ಪತ್ರಚಳುವಳಿ ಮೂಲಕ ಸಕಾರಕ್ಕೆ ಹತ್ತಾರುಬಾರಿ ಕೋರಿಕೆ ಸಲ್ಲಿಸಲಾಗಿತ್ತು ಜತೆಗೆ ಜನಪ್ರತಿನಿಧಿಗಳ ಗಮನಕ್ಕೆ ಕೂಡ ತರಲಾಗಿತ್ತು, ಆದರೆ ಸಕರ್ಾರದಿಂದ ಸಕಾರತ್ಮಕ ನಿರ್ಧಾರ ಬಂದಿರುವುದಿಲ್ಲ.ದಕ್ಷಿಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ದಿ ಹೋಲಿಸಿದೆ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ದಿ ನಿರೀಕ್ಷಿತ ಮಟ್ಟದಲ್ಲಿ ಆಗಿರುವುದಿಲ್ಲ.
ಬಳ್ಳಾರಿ ಜಿಲ್ಲೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅತ್ಯಧಿಕ ತೆರಿಗೆ ಸಲ್ಲಿಕೆಯಾದೂ ಆದರೆ ಸರ್ಕಾರದಿಂದ ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ, ಸಾರಿಗೆ ಆರೋಗ್ಯ ಕ್ಷೇತ್ರಗಳಿಗೆ ಅನುದಾನಗಳು ಮತ್ತು ಅವಕಾಶಗಳು ಮರೀಚಿಕೆಯಾಗಿವೆ.
ಪ್ರತಿಭಟನೆಯಲ್ಲಿ ರೈತ ಸಂಘದ ವಿ.ಬಿ.ಸೋಮಶೇಖರ, ಮಂಜುನಾಥ, ಕೆ.ಮದುಕಪ್ಪ, ಎಲ್.ಜಿ.ಹೊನ್ನಪ್ಪ, ವಾರದಗೌಸ್ ಮೊಹಿದ್ದೀನ್, ಎ.ಕೊಟ್ರೇಶ, ಬಸವನಗೌಡ ಪಾಟೀಲ, ಅಜಿತ್, ಚಾಂದಸಾಹೇಬ್,ವಸಂತ, ಕೆ.ಪತ್ರೇಶ, ಕೋಡಿ ಕೊಟ್ರೇಶ, ಮಲ್ಲಿಒಡೆಯರ್ ನಾಗರಾಜ, ಶಿವರಾಜ, ಶಂಶುದ್ದೀನ್, ಜ್ಯೋತಿ ಮಲ್ಲಣ್ಣ, ಎಂ.ನಾಗಭೂಷಣ, ಸೋಗಿ ಹಾಲೇಶ, ಜಯಲಕ್ಷ್ಮಿ, ಎಂ.ಚಿದಾನಂದ, ಬೀರಪ್ಪ ಇದ್ದರು.