ಲೋಕದರ್ಶನ ವರದಿ
ಹೂವಿನಹಡಗಲಿ 09: ಅಯ್ಯಪ್ಪ ಸ್ವಾಮಿಗಳು ಹಾಗೂ ಹನುಮ ಮಾಲಾಧಾರಿಗಳಿಗೆ ಉಪಹಾರ ವಿತರಿಸುವ ಮೂಲಕ ಪಟ್ಟಣದ ರಾಜಬಾಗ ಸವಾರ್ ಯಮನೂರಸ್ವಾಮಿ ದರ್ಗಾದಲ್ಲಿರುವ ಇಲ್ಲಿನ ಯಂಗ್ ಸ್ಟಾರ್ ಆಫ್ ಮುಸ್ಲಿಮರು ಭಾವೈಕೆತೆ ಮರೆದಿದ್ದಾರೆ.
ರಾಜಬಾಗ ಸವಾರ್ ದರ್ಗಾದಲ್ಲಿ ರಾತ್ರಿ ಮುಸ್ಲಿಮರು ಯುವಕರ ಪಡೆಯೊಂದು 40ಜನ ಅಯ್ಯಪ್ಪ ಸ್ವಾಮಿಗಳು ಮತ್ತು ಹನುಮ ಮಾಲಾಧಾರಿಗಳಿಗೆ ಉಪಹಾರ ವಿತರಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಕೇವಲ ಮುಸ್ಲಿಮರಷ್ಟೇ ಅಲ್ಲ ಇಲ್ಲಿನ ಹಿಂದೂಗಳು ಕೂಡ ಮುಸ್ಲಿಮರು ಆಚರಿಸುವ ರಂಜಾನ್ ಉಪವಾಸ ಸಂದರ್ಭದಲ್ಲಿ ಇಪ್ತಾರ್ ಕೂಡ ಮಾಡುತ್ತಾರೆ. ಇಲ್ಲಿನ ಹಿಂದು-ಮುಸ್ಲಿಮರು ಹೊಸ ಪದ್ದತಿಗೆ ನಾಂದಿ ಹಾಡಿದ್ದು, ಭಾವೈಕ್ಯೆದ ಕೇಂದ್ರದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದಾರೆ. ಹಿಂದು-ಮುಸ್ಲಿಮರು ಹಿರಿಯರು ಸಹೋದರಂತೆ ನಡೆದುಕೊಂಡು ಬಂದಿದ್ದು ನಾವು ಸಹ ಹಿರಿಯರ ಮಾರ್ಗದರ್ಶನದಲ್ಲಿ ಹೋಗುತ್ತಿದ್ದೇವೆ ಎಂದು ಸಮಿತಿ ಎಜಾಜ್ ಮೈನು,ಫಯಾಜ್, ಶೇಕ್ ಹೇಳಿದರು.