ಹೂವಿನಹಡಗಲಿ: ಸ್ವಚ್ಛತೆ ಕಾಪಾಡಿ ನಗರ ಸುಂದರ ಗೊಳಿಸಿ: ರಾಘವೇಂದ್ರ

ಲೋಕದರ್ಶನ ವರದಿ

ಹೂವಿನಹಡಗಲಿ 22: ಮುಜುರಾಯಿ ಖಾತೆ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಆದೇಶ ಮೇರೆಗೆ ಪುರಸಭೆ ಹೂವಿನಹಡಗಲಿ, ಜೆಸಿಐ ಹೂವಿನಹಡಗಲಿ ರಾಯಲ್, ಜೆಸಿಐ ಜಾಸ್ಮೀನ್, ಮಲ್ಲಿಗೆ ಯೋಗ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ರಾಜೀವ ನಗರದಲ್ಲಿ ಆಯೋಜಿಸಿದ್ದ ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ರಾಘವೇಂದ್ರ ರಾವ್ ನೈಸಗರ್ಿಕವಾಗಿ ಕೊಳೆಯುವ ತ್ಯಜ್ಯ ವಸ್ತುಗಳಾದ ತರಕಾರಿ, ಹೂವು, ಹಣ್ಣು, ಆಹರ ಪದಾರ್ಥಗಳು, ಒಣಗಿದ ಎಲೆ, ಒಣಕಸ ಲೋಹದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಗಾಜು ಪುಡಿ, ರಬ್ಬರ್, ಕಗದ ರೊಟ್ಟು ಮುತಾದವುಗಳನ್ನ ಒಟ್ಟಾಗಿ ಹಾಕುವುದರಿಂದ ಕೊಳೆತು ವಾತಾವರಣ ಮಲೀನವಾಗಿ ನಾನಾ ರೋಗಗಳಿಗೆ ಎಡೆ ಮಾಡಿ ಕೊಡುತ್ತದೆ ಆದ್ದರಿಂದ ಹಸಿಕಸ ಮತ್ತು ಒಣಕಸಗಳನ್ನು ಬೇರ್ಪಡಿಸಿ ಪುರಸಭೆಯ ವಾಹನದಲ್ಲಿ ಹಾಕಬೇಕೆಂದು ಸಲಹೆ ನೀಡಿ ತ್ಯಾಜ್ಯ ವಸ್ತುಗಳ ಸಂಗ್ರಹಣೆಗಾಗಿ ಹಸಿರು ಮತ್ತು ಹಳದಿ ಪುಟ್ಟಿಗಳನ್ನು ಎಲ್ಲಾ ಮನೆಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಹೆಲ್ತ್ ಇನ್ಸಪೆಕ್ಟರ್ ಶ್ರೀನಿವಾಸ್, ಪುರಸಭೆ ಸದಸ್ಯೆ ನಿರ್ಮಲಾ ಪಕ್ಕೀರಪ್ಪ, ಮುಖಂಡ ರಾಮಸ್ವಾಮಿ ಪಕ್ಕೀರಪ್ಪ, ಜೆಸಿಐ ಅಧ್ಯಕ್ಷ ಜೆಸಿಐ ಕಿರಣ್ಕುಮಾರ್ ಜೈನ್, ಜೆಸಿಐ ವಲಯ ನಿದರ್ೇಶಕರಾದ ಹೇಮಾಕಿರಣ್, ಮಹಬಲೇಶ್.ಎನ್, ಡಾ.ಸೋಮಶೆಖರ್, ಡಾ.ಶಿವಕುಮಾರ್, ಜೆಸಿಐನ ಗಾಡ್ವಿನ ಸುಧಾಕರ್, ಭರತ್ ಕುಮಾರ್ ಚೌಹಾನ್, ಡುಂಗಾರ್ ಚಂದ್, ಡಾ.ಉಮೇಶ್, ಕಾರ್ಯದಶರ್ಿ ಹೆಚ್.ಕೆ.ಮಹೇಶ್, ಕೋಡಿಹಳ್ಳಿ ಕೊಟ್ರೇಶ್, ಕೋಡಿಹಳ್ಳಿ ವಿನಾಯಕ, ಮುಖಂಡ ಕೊಟ್ರೇಶ್ ನಾಯ್ಕ್ ಮುಂತಾದವರು ಉಪಸ್ಥತರಿದ್ದರು.