ಲೋಕದರ್ಶನ ವರದಿ
ಹೂವಿನಹಡಗಲಿ 13: ಬಂಜಾರ ಸಮುದಾಯ ಸಾಂಪ್ರದಾಯಿಕ ಕಸೂತಿ ಕಲೆ ಪ್ರೋತ್ಸಾಹಿಸಲು ವಿಶೇಷ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಇಲ್ಲಿನ ಮಿನಿವಿಧಾನ ಸೌಧ ಆವರಣದಲ್ಲಿ ಶನಿವಾರ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹ ಯೋಗದಲ್ಲಿ ಸರ್ಕಾರ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮುದಾಯದವರು ವಲಸೆ ತಡೆಗಟ್ಟಿ ಮಹಿಳೆಯರಿಗೆ ತರಬೇತಿ ಜತೆಗೆ ಮಾಸಿಕ 5ಸಾವಿರ ರೂ.ಗೌರವಧನ ನೀಡಲಾಗುತ್ತದೆ ಎಂದ ಅವರು ಈಗಾಗಲೇ 8ತಾಂಡಾಗಳಲ್ಲಿ 387 ಜನರನ್ನು ಆಯ್ಕೆ ಮಾಡಲಾಗಿದೆ ಎಂದರು.
ಬಂಜಾರು ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೂವಿನ ಹಡಗಲಿ.,ವಿಜಯಪುರ, ಕಲಬುರಗಿ,ದಾವಣಗೆರೆ, ಶಿವಮೊಗ್ಗ, ಮಧ್ಯೆ ಇರುವ ಸೂರಗೊಂಡನಕೊಪ್ಪದ ಸೇವಲಾಲ್ ಧರ್ಮ ಕ್ಷೇತ್ರ ಸೇರಿದಂತೆ ರಾಜ್ಯದ 10ಕಡೆಗಳಲ್ಲಿ ವಿಶೇಷ ಕೌಶಲ್ಯ ಅಭಿವೃದ್ದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸಧ್ಯದಲ್ಲೇ ಪಟ್ಟಣದ ಹಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಂಪರಾ ಕಸೂತಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತದೆ ಎಂದರು.
27.50 ಕೋಟಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ:
ಪಟ್ಟಣದ ಮಿನಿವಿಧಾನ ಸೌಧದಲ್ಲಿ 27.50 ಕೋಟಿ ರೂ.ವೆಚ್ಚದ ಕೌಶಲ್ಯ ತರಬೇತಿ ಕೇಂದ್ರವನ್ನು ಸಚಿವರು ಉದ್ಘಾಟಿಸಿದ ಅವರು ಈಗಾಗಲೇ ರಾಜ್ಯದಲ್ಲಿ 22ಕೌಶಲ್ಯ ತರಬೇತಿ ಕೇಂದ್ರಗಳಿದ್ದು, ಇದೀಗ ಗದಗ ಮತ್ತು ಹೂವಿನಹಡಗಲಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು ಎಸ್.ಎಸ್.ಎಲ್.ಸಿ.ಪಿಯುಸಿ ವಿದ್ಯಾಥರ್ಿಗಳಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದರು.
ಬಿಜೆಪಿಗೆ ಅಧಿಕಾರ ದಾಹ:
ಸಮ್ಮಿಶ್ರ ಸರ್ಕಾರ ರೈತ, ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲಿಕ್ಕೆ ಬಿಡುತ್ತಿಲ್ಲ,ಶಾಸಕರನ್ನು ಖರೀದಿ, ಭಷ್ಟಾಚಾರ ಮಾಡಲಿಕ್ಕೆ ಮುಂದಾಗಿದ್ದು, ಬಿಜೆಪಿ ಶಾಸಕರಿಗೆ ಅಧಿಕಾರದ ದಾಹ ಹೆಚ್ಚಾಗಿದೆ. ಸಮ್ಮಿಶ್ರ ಸಕರ್ಾರದ ಆಡಳಿತವನ್ನು ಮಾಡಲಿಕ್ಕೆ ಬಿಡದೇ ಅಡ್ಡಗಾಲು ಆಗಿದ್ದು, ಇನ್ನು 5ವರ್ಷ ಸಮ್ಮಿಶ್ರ ಸಕರ್ಾರ ಅಧಿಕಾರವನ್ನು ಪೂರೈಸುತ್ತಿದೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕೆ.ಅಯ್ಯನಹಳ್ಳಿ ಗ್ರಾ.ಪಂ.ಕಟ್ಟಡ ಭೂಮಿ ಪೂಜೆಗೆ ಪರ-ವಿರೋಧ:
ಗ್ರಾಮ ಪಂಚಾಯ್ತಿ ಕಟ್ಟಡದ ಭೂಮಿ ಪೂಜೆಗೆ ಗ್ರಾ.ಪಂ.ಅಧ್ಯಕ್ಷರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಏಕಾ ಏಕಿ ಸಚಿವರು ಭೂಮಿ ಪೂಜೆಯನ್ನು ನೆರವೇರಸಲಿಕ್ಕೆ ಬಂದಾಗ ಬಿಜೆಪಿ ಮಾಜಿ ಶಾಸಕ ಬಿ.ಚಂದ್ರನಾಯ್ಕ ನೇತೃತ್ವದಲ್ಲಿ ಪಕ್ಷದ ಅಧ್ಯಕ್ಷ ಎಂ.ಬಿ.ಬಸವರಾಜ,ಮುಖಂಡಡರು,ಕಾರ್ಯಕರ್ತರು ಪಂಚಾಯ್ತಿಗೆ ಮುತ್ತಿಗೆ ಹಾಕಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.
ಬೀರಬ್ಬಿ ನೂತನ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಉದ್ಘಾಟಿಸಿದರು ನಂತರ ಹಿರೇಕೊಳಚಿ,ಚಿಕ್ಕಕೊಳಚಿ ಗ್ರಾಮಗಳಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾ.ಪಂ.ಅಧ್ಯಕ್ಷೆ ಕೆ.ಶಾರದಮ್ಮ, ಜಿ.ಪಂ.ಸದಸ್ಯರಾದ ವೀಣಾ ಪರಮೇಶ್ವರಪ್ಪ, ಲಲಿತಮ್ಮ,ತಹಶೀಲ್ದಾರ ಕೆ.ರಾಘವೇಂದ್ರರಾವ್, ತಾ.ಪಂ.ಇಒ ಯು.ಎಚ್.ಸೋಮಶೇಖರ, ಮುಖಂಡರಾದ ಐಗೋಳ ಚಿದಾನಂದ, ಅರವಳ್ಳಿ ವೀರಣ್ಣ, ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಜ್ಯೋತಿ ಮಲ್ಲಣ್ಣ, ಬಸವನಗೌಡಪಾಟೀಲ ಇದ್ದರು.